ಗ್ರಾಮಾಂತರ ಸುದ್ದಿ

ಕೊಕ್ಕಡದ ಶಾಂತಪ್ಪ ಮಡಿವಾಳರವರ ನೇತೃತ್ವದಲ್ಲಿ 45 ಭಕ್ತರು ತಿರುವನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಭೇಟಿ

ಕೊಕ್ಕಡ :ಕೊಕ್ಕಡದ ಶಾಂತಪ್ಪ ಮಡಿವಾಳರವರ ನೇತೃತ್ವದಲ್ಲಿ ಸುಮಾರು 45 ಭಕ್ತರು ತಿರುವನಂತಪುರ ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಜು.20ರಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ದೇವಸ್ಥಾನದ ಪ್ರಧಾನ ಅರ್ಚಕರಾದ ಕೊಕ್ಕಡದ ಸತ್ಯನಾರಾಯಣ ತೋಡ್ತಿಲ್ಲಾಯ ರವರು ಭಕ್ತರ ತಂಡಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಿದರು.

ಸುಮಾರು 600 ವರ್ಷಗಳ ಹಿಂದೆ ಕೊಕ್ಕಡದಿಂದ ಹೋಗಿ ‘ಬಿಲ್ವ ಮಂಗಳ ಮುನಿ’ ಎಂದು ಪ್ರಸಿದ್ಧಿ ಪಡೆದ ದಿವಾಕರ ಮುನಿಗಳು ನಿರ್ವಾಣ ಹೊಂದಿದ ಸಮಾಧಿ ಹಾಗೂ ಮಠಕ್ಕೆ ಭೇಟಿ ನೀಡಿ ನಂತರ ಗುರುವಾಯೂರಿಗೆ ತೆರಳಿದರು.

ನಿಮ್ಮದೊಂದು ಉತ್ತರ