ಗ್ರಾಮಾಂತರ ಸುದ್ದಿ

ಕೊಯ್ಯೂರು ಗ್ರಾಮ ಪಟ್ಟಣ ಪಂಚಾಯತ್ ಸೇರ್ಪಡೆ ಆದೇಶ ರದ್ದು ಪಡಿಸುವಂತೆ ಮನವಿ

ಬೆಳ್ತಂಗಡಿ : ಕೊಯ್ಯೂರು ಗ್ರಾಮವನ್ನುಪಟ್ಟಣ ಪಂಚಾಯತ್ ಗೆ ಸೇರ್ಪಡೆಗೊಳಿಸರುವ ಆದೇಶವನ್ನು ಹಿಂಪಡೆಯವಂತೆ ರಾಜ್ಯ ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮೂಲಕ ಸರ್ಕಾರಕ್ಕೆ ಸಲ್ಲಿಸುವಂತೆ ಕೊಯ್ಯೂರು ಗ್ರಾಮಸ್ಥರು ಮನವಿ ಸಲ್ಲಿಸಿದರು.

ಕೊಯ್ಯುರು ಉಣ್ಣಾಲು ಮಸೀದಿಯ ಮದರಸ ಕಟ್ಟಡಕ್ಕೆ ಅನುದಾನವನ್ನು ಮತ್ತು ಉಣ್ಣಾಲು ಬರೆಯದಡ್ಡ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಅನುದಾನವನ್ನು ನೀಡುವಂತೆ
ಸರ್ಕಾರಕ್ಕೆ ರಕ್ಷಿತ್ ಶಿವರಾಂ ಅವರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು .
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರವೀಣ್ ಗೌಡ ಮಾವಿನಕಟ್ಟೆ ,ಗ್ರಾಮ ಪಂಚಾಯತ್ ಸದಸ್ಯರುಗಳಾದ ಲೋಕೇಶ್ ಗೌಡ ಪಾಂಬೇಲು ,ಲತೀಫ್ ಉಣ್ಣಾಲು, ಸಲೀಂ ಪಾತ್ರಳ,ಸಿದ್ದೀಕ್ ಎಂ.ಎಸ್. ಮಲೆಬೆಟ್ಟು ಉಪಸ್ಥಿತರಿದರು.

ನಿಮ್ಮದೊಂದು ಉತ್ತರ