ನಿಧನ ಸುದ್ದಿ

ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದರಾಗಿದ್ದ ಕುಂಬ್ಳೆ ಸುಂದರ ರಾವ್ ನಿಧನ

ಬೆಳ್ತಂಗಡಿ: ಮರೆಯಲಾರದ ಮೇರು ಕಲಾವಿದ, ಮಾತಿನಮಲ್ಲ, ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಹಿರಿಯ ಕಲಾವಿದರಾಗಿದ್ದ ಕುಂಬ್ಳೆ ಸುಂದರರಾವ್ (೮೮ವ) ಬುಧವಾರ ಮಂಗಳೂರಿನಲ್ಲಿ ಸ್ವಗೃಹದಲ್ಲಿ ನಿಧನರಾದರು.

ಅವರ ಅಂತ್ಯ ಸಂಸ್ಕಾರ ಇಂದು ಗುರುವಾರ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಅವರಿಗೆ ಪತ್ನಿ, ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರು ಇದ್ದಾರೆ.
ಧರ್ಮಸ್ಥಳ ಮೇಳದಲ್ಲಿ ಮೂವತ್ತು ವರ್ಷಗಳ ಕಾಲ ಪ್ರಧಾನ ಕಲಾವಿದರಾಗಿ ಸೇವೆ ಸಲ್ಲಿಸಿದ ಇವರು ಮಾತಿನ ಮಲ್ಲರಾಗಿ, ತ್ರಾಸವಿಲ್ಲದೆ ಪ್ರಾಸಬದ್ಧವಾಗಿ ಮಾತನಾಡುವ ವಿಶೇಷ ವಾಕ್ ಚಾತುರ್ಯ ಹೊಂದಿದ್ದರು.
ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗದ ಗೋವಿಂದ ದೀಕ್ಷಿತ, ಕುಮಾರಯ್ಯ ಹೆಗ್ಗಡೆ ಪಾತ್ರಗಳಲ್ಲದೆ ಭರತೇಶ ವೈಭವ ಪ್ರಸಂಗದ ಭರತ ಚಕ್ರವರ್ತಿ ವಿಶ್ವಾಮಿತ್ರ ಮೇನಕೆಯ ವಿಶ್ವಾಮಿತ್ರ, ಸಾಮ್ರಾಟ್ ಅಶೋಕ ಪ್ರಸಂಗದ ಅಶೋಕ, ದ್ರುಪದ ಗರ್ವಭಂಗದ ದ್ರೋಣ ಮೊದಲಾದ ಪಾತ್ರಗಳ ಮೂಲಕ ತನ್ನ ಕಲಾ ಪ್ರೌಢಿಮೆ ಮೆರೆದು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

ಸುರತ್ಕಲ್ ಕ್ಷೇತ್ರದ ಶಾಸಕರಾಗಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾಗಿಯೂ ಅವರು ಉತ್ತಮ ಸೇವೆ ನೀಡಿದ್ದಾರೆ.
ಡಿ. ವೀರೇಂದ್ರ ಹೆಗ್ಗಡೆ ಸಂತಾಪ: ಧರ್ಮಸ್ಥಳ ಮೇಳದ ಪ್ರಧಾನ ಕಲಾವಿದರಾಗಿ ಅನೇಕ ವರ್ಷಗಳ ಕಾಲ ಸೇವೆ ಮಾಡಿದ ಕುಂಬ್ಳೆ ಸುಂದರ ರಾವ್ ನಿಧನದ ಬಗ್ಯೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗಾಢ ಸಂತಾಪ ವ್ಯಕ್ತಪಡಿಸಿ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದ್ದಾರೆ.

ನಿಮ್ಮದೊಂದು ಉತ್ತರ