ತಣ್ಣೀರುಪಂತ: ತಣ್ಣೀರುಪಂತ ಗ್ರಾಮದ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಮಹಾಬಲ ರೈ ಮಡಪ್ಪಾಡಿ ಅವರು ಜು. 19 ರಂದು ನಿಧನರಾದರು.
ಅವರಿಗೆ 83 ವಷ೯ ವಯಸ್ಸಾಗಿತ್ತು.ಮಹಾಬಲ ರೈ ಅವರು ತಣ್ಣೀರುಪಂತ ಗ್ರಾಮದ ಅಂಚೆ ಇಲಾಖೆಯ ಲ್ಲಿ 35 ವಷ೯ಗಳ ಕಾಲ ಅಂಚೆ ಪಾಲಕರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ, ಎಲ್ಲರ ಪ್ರೀತಿ -ವಿಶ್ವಾಸಕ್ಕೆ ಪಾತ್ರರಾಗಿದ್ದರು. ಮೃತರು ಪತ್ನಿ ಇಬ್ಬರು ಮಕ್ಕಳು ಹಾಗೂ ಬಂಧು ವಗ೯ದವರನ್ನು ಅಗಲಿದ್ದಾರೆ.