ಬೆಳ್ತಂಗಡಿ : ಮೇಲಂತಬೆಟ್ಟು ನೂಜೋಡಿ ಮನೆಯ ಡಾ. ಸೋಹನ್ ಕುಮಾರ್ ಅವರ ಪುತ್ರಿ ಕು ಅಕ್ಷತಾ (20ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಜು.15 ರಂದು ಬೆಳಿಗ್ಗಿನ ಜಾವ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಕಳೆದ ಎಂಟು ವರ್ಷದಿಂದ ನರದ ಸಮಸ್ಯೆಯಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ಮೃತರು ತಂದೆ ಕಾಪು ಬೆಳಪು ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸೋಹನ್ ಕುಮಾರ್, ತಾಯಿ ಪೂರ್ಣಿಮಾ ಸೋಹನ್, ಸಹೋದರ ಇಶಾನ್ ಎಸ್.ಎನ್ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.