ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ ಎಜ್ಯುಕೇಶನ್ ಸೊಸೈಟಿ ಕಾಯ೯ದಶಿ೯ ಡಾ. ಯಶೋವಮ೯ ಅವರು ಮೇ.22ರ ರಾತ್ರಿ ಸಿಂಗಪೂರ್ ನಲ್ಲಿ ನಿಧನರಾದರು.
ಅನಾರೋಗ್ಯದಿಂದ ಸಿಂಗಪೂರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ಧ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಚಾರ್ಯರಾಗಿ ಹಲವು ವಷ೯ ಅವರು ಸೇವೆ ಸಲ್ಲಿಸಿದ್ದರು. ಬೆಳ್ತಂಗಡಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಗಿ, ಹಲವಾರು ಸಮ್ಮೇಳನ ಗಳನ್ನು ನಡೆಸಿದ್ದರು. ಮೃತರು ಪತ್ನಿ,ಇಬ್ಬರು ಪುತ್ರರು, ಬಂಧು ವಗ೯, ಕುಟುಂಬಸ್ಥರನ್ನು ಆಗಲಿದ್ದಾರೆ.