ನಿಟ್ಟಡೆ . ಇಲ್ಲಿಯ ನಿಟ್ಟೆಡೆ ಗ್ರಾಮದ ಪಾಲ್ಗರೋಡಿ ಮನೆಯ ವಿಶ್ವನಾಥ ಪೂಜಾರಿ ಯವರ ಪುತ್ರ ಗಣೇಶ್(25 ವ) ಅಲ್ಪಕಾಲದ ಅಸೌಖ್ಯದಿಂದ ಮೇ.2 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಇವರು ಮಂಗಳೂರಿನ ಕಾಲೇಜೊಂದರಲ್ಲಿ ಚಾರ್ಟಡ್ ಅಕೌಂಟಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದು ಎಲ್ಲರೊಂದಿಗೂ ಉತ್ತಮವಾಗಿದ್ದರು.
ಮೃತರು ತಂದೆ, ತಾಯಿ, ಸಹೋದರರು, ಸಹೋದರಿಯರು ಹಾಗೂ ಅಪಾರ ಕುಟುಂಬ ವರ್ಗದವರನ್ನು ಆಗಲಿದ್ದಾರೆ.ಮೃತರ ಮನೆಗೆ ಶಾಸಕ ಹರೀಶ್ ಪೂಂಜ, ಕುಕ್ಕೇಡಿ ಗ್ರಾ.ಪಂ ಅಧ್ಯಕ್ಷ ಜನಾರ್ಧನ ಪೂಜಾರಿ, ವೇಣೂರು ಮುಖ್ಯಕಾರ್ಯನಿರ್ವಣಾಧಿಕಾರಿ ಜಯಂತ್ ಪೂಜಾರಿ ಹಾಗೂ ಊರವರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.