ವೇಣೂರು: ಮೂಡುಕೋಡಿ ಗ್ರಾಮದ ತಿರುಗಣಬೆಟ್ಟು ಮನೆ ನಿವಾಸಿ, ದೇವಾಡಿಗ ಸಮಾಜದ ಧೀಮಂತ ನಾಯಕ
ಆನಂದ ದೇವಾಡಿಗ (74ವ) ಅವರು ಅಲ್ಪ ಕಾಲದ ಅಸೌಖ್ಯದಿಂದ
ಇಂದು ಸಂಜೆ 7.30 ಕ್ಕೆ ನಿಧನರಾದರು.
ವೇಣೂರು ದೇವಾಡಿಗರ ಸಮುದಾಯ ಭವನ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿ, ದುಬೈ, ಮುಂಬಯಿ ಹಾಗೂ ಇನ್ನಿತರ ಕಡೆಗಳಲ್ಲಿ ಸಮಾಜ ಬಾಂಧವರು ಮತ್ತು ದಾನಿಗಳನ್ನು ಸಂಪರ್ಕಿಸಿ ಗರಿಷ್ಠ ಸಂಪನ್ಮೂಲ ಕ್ರೋಢೀಕರಿಸಿ ದೇವಾಡಿಗರ ಸಮುದಾಯ ಭವನದ ನಿರ್ಮಾಣದಲ್ಲಿ ಕಾಯಾ ವಾಚಾ ಮನಸಾ ಶ್ರಮ ವಹಿಸಿದ್ದರು.
ಮೃತರು ಪತ್ನಿ ಶ್ರೀಮತಿ ಶೋಭಾ, ಪುತ್ರರಾದ ತುಷಾರ್ ಮತ್ತು ನಿಹಾರ್, ಸಹೋದರಿ, ಅಳಿಯಂದಿರು, ಬಂಧು- ವಗ೯ದವರನ್ನು ಅಗಲಿದ್ದಾರೆ.