ಧರ್ಮಸ್ಥಳದ ಉದ್ಯಮಿ
ಹರೀಶ್ ರಾವ್ (ಕೊಠಾರಿ)ವಿಧಿವಶ
ಧರ್ಮಸ್ಥಳ: ಇಲ್ಲಿಯ ಧರ್ಮಸ್ಥಳ ಗ್ರಾಮದ ಚರ್ಚ್ ಬಳಿಯ ನಿವಾಸಿ ಹರೀಶ್ ರಾವ್ (41ವ) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ಮಾ.10ರಂದು ಬೆಳಿಗ್ಗೆ ನಿಧನರಾದರು.
ಧರ್ಮಸ್ಥಳದಲ್ಲಿ ಉದ್ಯಮಿಯಾಗಿ, ಜನಪ್ರಿಯರಾಗಿದ್ದ ಇವರು ಅಸೌಖ್ಯಕ್ಕೊಳಗಾಗಿ ಪುತ್ತೂರಿನ ತನ್ನ ಸಂಬಂಧಿಕರ ಮನೆಯಲ್ಲಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲೇ ನಿಧನರಾದರೆನ್ನಲಾಗಿದೆ. ಮೃತರು ತಾಯಿ ದೇವಕಿ, ಪತ್ನಿ ಸುಷ್ಮಾ ಹಾಗೂ ಮೂವರು ಹೆಣ್ಣುಮಕ್ಕಳಾದ ದೃತಿ, ಲಹಾರಿಕಾ, ಬೃಂದ ಮತ್ತು ಸಹೋದರ, ಸಹೋದರಿ ಕುಟುಂಬಸ್ಥರನ್ನು ಅಗಲಿದ್ದಾರೆ.