ಬೆಳ್ತಂಗಡಿ : ಸುಲ್ಕೇರಿ ಗ್ರಾಮದ
ಸೂರ್ಯನಾರಾಯಣ ಕೃಪಾ ನಿವಾಸಿ, ನಿವೃತ್ತ ವಲಯ ಅರಣ್ಯಾಧಿಕಾರಿ ಲೋಕಯ್ಯ ಪೂಜಾರಿ (73ವ) ಅವರು ಅಲ್ಪಕಾಲದ ಅಸೌಖ್ಯದಿಂದ ಫೆ.18ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು
ಅಲಂಕರಿಸಿ, ವಲಯ ಅರಣ್ಯ ಅಧಿಕಾರಿಯಾಗಿ
ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಪ್ರೇಮ, ಪುತ್ರ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಮ್ಯಾನೇಜರ್ ಸುಧೀರ್ ಎಸ್.ಪಿ, ಪುತ್ರಿಯರಾದ ಸುರೇಖಾ, ಸುಚಿತ್ರ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.