ಪಡಂಗಡಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿಯ ಭೋಜರಾಜ ಹೆಗ್ಡೆ ( 99ವ) ಅವರು ನ.9ರಂದು ಸಂಜೆ ತಮ್ಮ ಪಡಂಗಡಿಯ ಸ್ವಗ್ರಹದಲ್ಲಿ ನಿಧನರಾದರು.
ಅಪ್ಪಟ ಗಾಂಧಿವಾದಿಯಾಗಿ ಬದುಕಿದ್ದ ಭೋಜರಾಜ ಹೆಗ್ಡೆಯವರು ಸ್ವಾತಂತ್ರ್ಯ ಹೋರಾಟದಲ್ಲಿಯೂ ಭಾಗವಹಿಸಿದ್ದರು. ಸರಳ
ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಅವರು ಪಾತ್ರರಾಗಿದ್ದರು. ಮೃತರು ಪುತ್ರ ವಿನಯ ಪ್ರಸಾದ್ ಪುತ್ರಿ ವೀಣಾ
ಹಾಗೂ ಬಂಧು-ವರ್ಗದವರನ್ನು ಅಗಲಿದ್ದಾರೆ.