ಬೆಳ್ತಂಗಡಿ: ಖ್ಯಾತ ಆಟಿ೯ಸ್ಟ್ ಮೇಲಂತಬೆಟ್ಟು ಗ್ರಾಮದ ನಿವಾಸಿ, ಸುರೇಶ್ ಭಟ್ (50.ವ) ರವರು ಅಸೌಖ್ಯದಿಂದ ಬಳಲಿ ಅ.29 ರಂದು ನಿಧನರಾದರು.
ಸುಮಾರು 25 ವರ್ಷಗಳಿಂದ ಬೆಳ್ತಂಗಡಿಯ ಸಂತೆಕಟ್ಟೆ ಐಡಿಯಲ್ ಕಾಂಪ್ಲೆಕ್ಸ್ ನಲ್ಲಿ ‘ ಸುರೇಶ್ ಆರ್ಟ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದರು. ಇವರು ಹವ್ಯಾಸಿ ಲೇಖಕರಾಗಿಯೂ ಹೆಸರುವಾಸಿಯಾಗಿದ್ದು, ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಈ ಹಿಂದೆ ‘ಬಣ್ಣದ ಕೊಡೆ’ ಎಂಬ ಚಲನಚಿತ್ರಕ್ಕೆ ಸಂಗೀತ, ಸಾಹಿತ್ಯ ರಚನಾಕಾರರಾಗಿ ಹಾಗೂ ಇವರ ಹಲವಾರು ಲೇಖನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿದೆ.