ಬೆಳ್ತಂಗಡಿ : ಪಿಲ್ಯ ಗ್ರಾಮದ ನಿವಾಸಿ, ಮಂಗಳೂರಿನ ಮಾಂಡೋವಿ ಮೋಟಾರ್ಸ್ ಟೂ ವಾಲ್ಯೂ ಸಂಸ್ಥೆಯ ವ್ಯವಸ್ಥಾಪಕ ಅಕ್ಷಯ್ ಕುಮಾರ್ ಅವರ ಪತ್ನಿ ಪವಿತ್ರಾ ಕುಮಾರಿ(30.ವ) ರವರು ಅಸೌಖ್ಯದಿಂದ ಅ.11 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ
ನಿಧನರಾದರು. ಮೆದುಳಿನ ರಕ್ತಸ್ರಾವ ಖಾಯಿಲೆಯಿಂದ ಬಳಲುತ್ತಿದ್ದ ಇವರಿಗೆ ಎರಡು ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆ.ನಡೆದಿದ್ದು, ಬಳಿಕ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ
ಕಾಯಿಲೆ ಉಲ್ಬಣಗೊಂಡ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ. ಇವರು ಪಿಲ್ಯ ಗುಡ್ ಫ್ಯೂಚರ್ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು.