ವೇಣೂರು: ಇಲ್ಲಿಯ ಶ್ರೀ ಬಾಹುಬಲಿ ಬೆಟ್ಟದ ನಿವಾಸಿ, ಪ್ರಸಿದ್ಧ ನಾಟಿವೈದ್ಯ ರಾಗಿದ್ದ ಜಿನೇಂದ್ರ ಶೆಟ್ಟಿ (53.ವ)) ಅವರು ಅ.3ರಂದು
ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನ ಹೊಂದಿದರು. ಪ್ರಗತಿಪರ ಕೃಷಿಕರೂ ಆಗಿದ್ದ ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಸಹೋದರನನ್ನು ಅಗಲಿದ್ದಾರೆ. ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಬಂಗ್ವಾಡಿ ಅರಮನೆಯ ಯಶೋಧರ ಬಲ್ಲಾಳ್, ಜೈನತೀರ್ಥಕ್ಷೇತ್ರ ಸಮಿತಿ ಪದಾಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಮೃತರ ಅಂತಿಮ ದರ್ಶನ ಪಡೆದರು.