ಬೆಳಾಲು : ಬೆಳಾಲು ಗ್ರಾ. ಪ. ಮಾಜಿ ಅಧ್ಯಕ್ಷ ಏರ್ದೋಟ್ಟು ಮೋಹನ ಗೌಡ (47 ವಷ೯) ಅನಾರೋಗ್ಯದಿಂದಾಗಿ ಕಳೆದ ಕೆಲವು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದವರು ಚಿಕಿತ್ಸೆ ಗೆ ಸ್ಪಂದಿಸದೆ ಅ 3 ರಂದು ಕೊನೆಯುಸಿರೆಳೆದರು ಮೃತರು ತಂದೆ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಜತ್ತನ್ನ ಗೌಡ, ಸಹೋದರ ನೋಟರಿ ವಕೀಲ ಶ್ರೀನಿವಾಸ ಗೌಡ, ಜಯಾನಂದ ಗೌಡ, ತಾಯಿ, ಸಹೋದರಿ, ಪತ್ನಿ ಜಯಲಕ್ಷ್ಮಿ, ಇಬ್ಬರು ಪುತ್ರರು ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವು ನಾಳೆ ಬೆಳಿಗ್ಗೆ ಎಂಟು ಗಂಟೆಯ ಹೊತ್ತಿಗೆ ಬೆಳಾಲಿನ ಅಕ್ಕಿ ಮಿಲ್ಲಿನ ವಠಾರಕ್ಕೆ ತಲುಪುವುದು.
ಮಿಲ್ಲಿನಲ್ಲಿ ಮೋಹನ ಗೌಡರ ಎಲ್ಲಾ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದು, ಬಳಿಕ ಏರ್ದೋಟ್ಟಿನ ಮನೆಯಲ್ಲಿ ವಿಧಿ ವಿಧಾನ ನಡೆಯಲಿದೆ. ಬೆಳಾಲು ಗ್ರಾಮಪಂಚಾಯತು ಮಾಜಿ ಅಧ್ಯಕ್ಷರಾಗಿ, ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರಾಗಿ,
ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿ್ರಿಯರಾಗಿದ್ದ ರು