ಬೆಳ್ತಂಗಡಿ : ಉರುವಾಲು ಗ್ರಾಮದ ಮುಂಡ್ರೋಟ್ಟು ನಿವಾಸಿ ನಾರಾಯಣ ಗೌಡ (47ವ) ಅವರು ಆ.17ರಂದು ರಾತ್ರಿ 2 ಗಂಟೆಗೆ ಬ್ರೈನ್ ಸ್ಟ್ರೋಕ್ ನಿಂದ ನಿಧನ ಹೊಂದಿದ್ದಾರೆ.
ವೃತ್ತಿಯಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಇವರು ಹೈನುಗಾರಿಕೆ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಮೃತರು ಪತ್ನಿ ಹೇಮಾವತಿ, ಪುತ್ರರಾದ ರಾಜೇಶ್ ಮತ್ತು ತಿಲಕ್ ಹಾಗೂ ಪುತ್ರಿ ಚಿತ್ರಾಶ್ರೀ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.