ಬೆಳ್ತಂಗಡಿ: ಇಳಂತಿಲ ಗ್ರಾಮದ ಪೆದಮಲೆ ನಿವಾಸಿ ಮುಗ್ಗ ಗುತ್ತಿನ ಹಿರಿಯರಾದ ದಿ.ಪೆದಮಲೆ ರಂಗಪ್ಪ ಪೂಜಾರಿ ಅವರ ಹಿರಿಯ ಪುತ್ರಿ ಬೇಬಿ ಕೃಷ್ಣಪ್ಪ (82ವ) ಅವರು ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಆ.2ರಂದು ನಿಧನ ಹೊಂದಿದರು. ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಅಂತ್ಯ ಸಂಸ್ಕಾರ ಆ.3ರಂದು ಸಾಯಿಕೃಪಾ ಪೆದಮಲೆಯಲ್ಲಿ ನಡೆಯಲಿದೆ.