ನಿಧನ ಸುದ್ದಿ

ಕೀಲು ಕುದುರೆ ಸ್ತ್ರೀ ವೇಷಧಾರಿ ಜಗದೀಶ್ ನಿಧನ

ಕಲ್ಮಂಜ: ಬೆಳ್ತಂಗಡಿ ಶೆಟ್ಟಿ ಆರ್ಟ್ಸ್ ಸಂಸ್ಥೆಯ ಕೀಲುಕುದುರೆಬಳಗದಲ್ಲಿ ಸ್ತ್ರೀ ವೇಷಧಾರಿ ಕಲಾವಿದ ಜಗದೀಶ್(42.ವ)ರವರು ಜು.9 ರಂದು ನಿಧನರಾಗಿದ್ದಾರೆ.

ಮೂಲತಃ ಕಲ್ಮಂಜ ಗ್ರಾಮದ ಕುಕ್ಕಿಮಜಲು ನಿವಾಸಿಯಾದ ಇವರು ಪ್ರಸ್ತುತ ಕಕ್ಕಿಂಜೆ ಬಳಿ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದರು. ಜು.8ರಂದು ರಾತ್ರಿ ಊಟ ಮುಗಿಸಿ ಮಲಗಿದ ಇವರು ನಿನ್ನೆ ಸಂಜೆಯವರೆಗೂ ಮನೆಯ ಬಾಗಿಲು ತೆರೆಯದೇ ಇದ್ದುದನ್ನು ಗಮನಿಸಿದ ಸ್ಥಳೀಯರು ಮನೆ ಬಾಗಿಲು ಒಡೆದು ನೋಡಿದಾಗ ಅವರು ಮೃತಪಟ್ಟಿರುವುದು ಪತ್ತೆಯಾಗಿದೆ.ಇವರಿಗೆ ಒಂದೂವರೆ ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದು, ಇವರ ಪತ್ನಿ ಶೋಭಾ ರವರು ತವರು ಮನೆಗೆ ಹೋಗಿದ್ದಂತಹ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಧರ್ಮಸ್ಥಳ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ಶರೀರವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೃತರು ಪತ್ನಿ ಶೋಭಾ, ಸಹೋದರರು ಬಂಧುವರ್ಗದವರನ್ನು ಅಗಲಿದ್ದಾರೆ.

ನಿಮ್ಮದೊಂದು ಉತ್ತರ