ಮಂಗಳೂರು: ಅಂತಾರಾಷ್ಟ್ರೀಯ ಯೋಗ ದಿನ 2022 ಅಂಗವಾಗಿ ಯೋಗ ಗಂಗೋತ್ರಿ ಹಾಗೂ ಎಸ್ ವ್ಯಾಸದ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಜರುಗಿದ ಮೂರನೇ ಅಂತಾರಾಷ್ಟ್ರೀಯ ಯೋಗಾಸನ ಚಾಂಪಿಯನ್ ಶಿಪ್ ನಲ್ಲಿ ಧರ್ಮಸ್ಥಳದ ದಿಶಾರಾಘ ಶೆಟ್ಟಿ ಧ್ವಿತೀಯಾ ಸ್ಥಾನ ಗಳಿಸಿದ್ದಾರೆ.
ಇವರು ಇತ್ತೀಚೆಗೆ ನಡೆದ ಬೆಂಗಳೂರು ಡಾ. ರಾಜ್ ಕುಮಾರ್ ಮೆಮೋರಿಯಲ್ 6ನೇ ರಾಷ್ಟ್ರೀಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಷಿಪ್ 2022ರಲ್ಲಿಯೂ ಪ್ರಥಮ ಸ್ಥಾನ ಗಳಿಸಿರುತ್ತಾರೆ.
ಇವರು ಮಂಗಳೂರಿನ ದೇಲಂಪಾಡಿ ಯೋಗ ಪ್ರತಿಷ್ಠಾನದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿಯವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದಿರುತ್ತಾರೆ. ಧರ್ಮಸ್ಥಳದ ಶ್ರೀಮತಿ ಸಾರಿಕಾ ಶೆಟ್ಟಿ ಮತ್ತು ಶ್ರೀ ದಿನೇಶ್ ಶೆಟ್ಟಿಯವರ ಪುತ್ರಿಯಾದ ಇವರು ಮಂಗಳೂರಿನ ಶ್ರೀ ವಿನೀತ್ ಶೆಟ್ಟಿ ಯವರ ಪತ್ನಿ.