ಜಿಲ್ಲಾ ವಾರ್ತೆ

ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ನ ನೇತೃತ್ವದಲ್ಲಿ ಶ್ರೀ ಜೈನ ಮಠದ ಪುನರ್ ನಿರ್ಮಾಣ ಕಾರ್ಯ

ಬೆಳ್ತಂಗಡಿ: ಸುಮಾರು 550 ವರ್ಷಗಳ ಪ್ರಾಚೀನತೆಯುಳ್ಳ ಕಾರ್ಕಳದ ದಾನಶಾಲೆಯಲ್ಲಿರುವ ಶ್ರೀ ಜೈನ ಮಠವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ‘ರಾಜರ್ಷಿ’ ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ, ಶ್ರೀ ಧರ್ಮೋತ್ಥಾನ ಟ್ರಸ್ಟ್‌ನ ನೇತೃತ್ವದಲ್ಲಿ ಪುನರ್ ನಿರ್ಮಾಣ ಕಾರ್ಯ ನಡೆಯಲಿದೆ.


ಪರಮಪೂಜ್ಯ ಮುನಿಶ್ರೀ 108 ಅಮಿತಂಜಯ ಕೀರ್ತಿ ಮಹಾರಾಜರು ಹಾಗೂ ಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜೂ.13ರಂದು ನಡೆದ ಜಿನಬಿಂಬ ಹಾಗೂ ದೈವ ಸಾನಿಧ್ಯಗಳ ಉತ್ಥಾಪನಾ ವಿಧಿ-ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್, ಶ್ರೀ ಜೈನಧರ್ಮ ಜೀರ್ಣೋದ್ಧಾರಕ

 ಸಂಘದ ಅಧ್ಯಕ್ಷ ಡಾ|| ಎಂ.ಎನ್ ರಾಜೇಂದ್ರ ಕುಮಾರ್, ಕಾರ್ಯದರ್ಶಿ ಎಂ.ಕೆ ವಿಜಯ್ ಕುಮಾರ್, ಜೈನ್ ಮಿಲನ್ ವಲಯಾಧ್ಯಕ್ಷ ಪುಷ್ಪರಾಜ್ ಜೈನ್, ವೈ. ಸೂರಜ್ ಕುಮಾರ್, ಸಂಪತ್ ಸಾಮ್ರಾಜ್ಯ, ಅಂಡಾರು ಮಹಾವೀರ ಹೆಗ್ಡೆ, ಪಟ್ಟದ ಪುರೋಹಿತರಾದ ನಾಗಕುಮಾರ್ ಇಂದ್ರ, ಪ್ರತಿಷ್ಠಾಚಾರ್ಯವರ್ಧಮಾನ ಇಂದ್ರಸ್ಥಳ, ಪುರೋಹಿತರಾದ ಶಾಂತಿನಾಥ ಇಂದ್ರ ಮುಂತಾದ ಸಮಾಜದ ಅನೇಕ ಗಣ್ಯರು ಉಪಸ್ಥಿತರಿದ್ದರು. ಮಠದ ವ್ಯವಸ್ಥಾಪರಾದ ಧನಕೀರ್ತಿ ಕಡಂಬ ಉಸ್ತುವಾರಿ ವಹಿಸಿದ್ದರು.

ನಿಮ್ಮದೊಂದು ಉತ್ತರ