ಜಿಲ್ಲಾ ವಾರ್ತೆ

ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿಯಲ್ಲಿ ಸಂಸ್ಥೆಯ 75 ವರ್ಷದ ಹಿನ್ನೆಲೆಯಲ್ಲಿ ಗ್ರಾಹಕರಿಗಾಗಿ ಎರಡನೇ ಆವೃತದ ಡ್ರಾ

ಬೆಳ್ತಂಗಡಿ:ಮುಳಿಯ ಜ್ಯುವೆಲ್ಸ್ ಬೆಳ್ತಂಗಡಿಯಲ್ಲಿ ಸಂಸ್ಥೆಯು ಪ್ರಾರಂಭವಾಗಿ 75 ವರ್ಷದ ಹಿನ್ನೆಲೆಯಲ್ಲಿ ಗ್ರಾಹಕರಿಗಾಗಿ ಎರಡನೇ ಆವೃತದ ಡ್ರಾ ವನ್ನು ಜೆಸಿಐ ಬೆಳ್ತಂಗಡಿ ಯ ಅಧ್ಯಕ್ಷರಾದ ಜೆಸಿ ಸ್ವರೂಪ್ ಶೇಖರ್ ಅವರು ನಡೆಸಿಕೊಟ್ಟರು.
ಸಂಸ್ಥೆಯ ಪ್ರಬಂಧಕರಾದ ಗುರುರಾಜ್ ಅವಭೃತ ಅವರು ಡ್ರಾ. ದ ಕುರಿತು ಮಾಹಿತಿಯನ್ನು ನೀಡಿದರು.
ಸ್ವರೂಪ್ ಶೇಖರ್ ಅವರು ವಿಜೇತರಿಗೆ ಅಭಿನಂದಿಸಿ, ಗ್ರಾಹಕರ ನಂಬಿಕೆಯನ್ನು ಉಳಿಸಿಕೊಳ್ಳುವಂತದ್ದು ಅತಿ ಮುಖ್ಯ. ಮುಳಿಯ ಸಂಸ್ಥೆಯು ಗ್ರಾಹಕರ ಬೇಡಿಕೆಗಳನ್ನು ಕ್ಲಪ್ತ ಸಮಯದಲ್ಲಿ ಈಡೇರಿಸಿ ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡಿದೆ. ಸಂಸ್ಥೆಯು ಇನ್ನೂ ಉತ್ತಮವಾಗಿ ಅಭಿವೃದ್ಧಿ ಹೊಂದಲಿ ಎಂದು ಹಾರೈಸಿದರು.
ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಜ
ಯಂತ್ ಅವರು ಉಪಸ್ಥಿತರಿದ್ದರು. ಸಿಬ್ಬಂದಿ ಕುಮಾರಿ ದೀಪಿಕಾ ಅವರು ಕಾರ್ಯಕ್ರಮ ನಿರೂಪಿಸಿದರು.

 

ನಿಮ್ಮದೊಂದು ಉತ್ತರ