ಜಿಲ್ಲಾ ವಾರ್ತೆ

ಬಿ.ಜೆ.ಪಿ ಎಸ್.ಟಿ ಮೋಛಾ೯ ದ.ಕ ಜಿಲ್ಲಾ ವಿಶೇಷ ಕಾಯ೯ಕಾರಿಣಿ

 

ಬೆಳ್ತಂಗಡಿ :   ಭಾರತೀಯ ಜನತಾ ಪಾರ್ಟಿ ಎಸ್ . ಟಿ ಮೋರ್ಛಾ ದಕ್ಷಿಣ ಕನ್ನಡ ಜಿಲ್ಲೆ ಇದರ ಜಿಲ್ಲಾ ವಿಶೇಷ ಕಾರ್ಯಕಾರಿಣಿ ಸಭೆ ಆ. 5ರಂದು ಬೆಳ್ತಂಗಡಿ ಶ್ರೀ ಧ.ಮಂ ಕಲಾಭವನದ ಪಿನಾಕಿ ಹಾಲ್ ನಲ್ಲಿ ಜರಗಿತು.


ಕಾರ್ಯ ಕ್ರಮವನ್ನು    ಬೆಳ್ತಂಗಡಿ ಬಿಜೆಪಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ದೇಶದಲ್ಲಿ ಬಿಜೆಪಿ ಪಕ್ಷ ನಂಬರ್1 ಸ್ಥಾನದಲ್ಲಿರಲು ಪಕ್ಷದ ಸಂಘಟನೆಯಿಂದ ಸಾಧ್ಯವಾಗಿದೆ .ಅಧಿಕಾರ ಪಡೆಯುವುದು ನಮ್ಮ ಮುಖ್ಯ ಉದ್ದೇಶವಾಗಬಾರದು
ದೇಶದ ರಕ್ಷಣೆ ಜೊತೆಗೆ ದೇಶವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಕಾರ್ಯ ನಮ್ಮದಾಬೇಕು ಜೊತೆಗೆ ಹಿಂದುತ್ವಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ನೋಡಿಕೊಳ್ಳುವುದು ಸಹ ನಮ್ಮ ಕತ೯ವ್ಯವಾಗಿದೆ ಎಂದು ತಿಳಿಸಿದರು. ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವುದರ ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ಸಮುದಾಯದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದೇ ಮುಖ್ಯ ಧ್ಯೇಯ ವಾಗಿರಬೇಕು ಎಂದು ಕರೆ ನೀಡಿದರು.


ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಜೆಪಿ ಎಸ್ . ಟಿ ಮೋಛಾ೯ ದ ಜಿಲ್ಲಾಧ್ಯಕ್ಷ ಚೆನ್ನಕೇಶವ ಮುಂಡಾಜೆ ಮಾತನಾಡಿ, ಜಿಲ್ಲೆಯಲ್ಲಿ ಎಸ್. ಟಿ ಮೋಛಾ೯ವನ್ನು ಬಲಪಡಿಸುವುದು ನಮ್ಮೆಲ್ಲರ ಗುರಿಯಾಗಿದೆ. ಪಕ್ಷಕ್ಕೆ ನಮ್ಮ ಕೊಡುಗೆ ಏನು ಎಂದು ಕಾರ್ಯಕರ್ತರು ಚಿಂತಿಸಬೇಕಾಗಿದೆ ಜಿಲ್ಲೆಯಲ್ಲಿ ಸಂಘಟನೆಯನ್ನು      ಬಲಪಡಿಸುವುದರ ಜೊತೆಗೆ ಪಕ್ಷದ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ತಮ್ಮನ್ನು ತೊಡಗಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಮಾಜಮುಖಿ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಸಂತೋಷ್ ಅತ್ತಾಜೆ ಅವರನ್ನು   ಅಭಿನಂದಿಸಲಾಯಿತು.ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಜಿ .ಪಂ ಮಾಜಿ ಸದಸ್ಯ ಕೊರಗಪ್ಪ ನಾಯ್ಕ ಎಸ್. ಟಿ ಮೋರ್ಛಾ ಜಿಲ್ಲಾ ಕಾರ್ಯದರ್ಶಿ ಜಯಶ್ರೀ ಕಕೇ೯ರ ಉಪಸ್ಥಿತರಿದ್ದರು .ಎಸ್ಟಿ ಮೋರ್ಚಾದ ತಾಲೂಕು ಕಾರ್ಯದರ್ಶಿ ವಿಠ್ಠಲ ವಂದೇಮಾತರಂ ಹಾಡಿದರು . ಪುತ್ತೂರು ಅಧ್ಯಕ್ಷ ಹರೀಶ್ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಲೋಕೇಶ್ ಕಾಯ೯ಕ್ರಮ ನಿರೂಪಿಸಿ,  ವಂಂದಿಸಿದರು.

 

ನಿಮ್ಮದೊಂದು ಉತ್ತರ