ಪುತ್ತೂರು; ತಾಲೂಕಿನ ಕರ್ಮಲ ಪ.ಜಾತಿ ಕಲೋನಿ ಎಂಬಲ್ಲಿ ಕರ್ನಾಟಕ ರಾಜ್ಯ ಬೈರ ಸಮಾಜ ನಿರ್ಮಾಣ ವೇದಿಕೆಯ ವತಿಯಿಂದ ಸಮಾಲೋಚನಾ ಸಭೆ ನಾಗರಾಜ್ ಎಸ್ ಲೃಾಲ ಬೆಳ್ತಂಗಡಿ ಇವರ ಸಮ್ಮುಖದಲ್ಲಿ ಸರಕಾರದ ನಿಯಮಗಳ ಪಾಲಿಸಿ ಸಾಮಾಜಿಕ ಅಂತರದಲ್ಲಿ ನಡೆಸಲಾಯಿತು.
ದೇಶಕ್ಕೆ ಅವರಿಸಿದ ಮಹಾಮಾರಿ ಕೊರನಾವನ್ನು ನಾವು ಸರಕಾರದ ಆದೇಶವನ್ನು ಪಾಲಿಸಿಕೊಂಡು ಜಾಗ್ರತರಾಗುವುದಲ್ಲದೆ ಇತರರ ಅರೋಗ್ಯದ ಹಿತ ದೃಷ್ಟಿಯಲ್ಲಿ ಪಾಲುದಾರಿಕೆಯಲ್ಲಿ ಕೈ ಜೋಡಿಸುವಂತೆ ಕರೆ ನೀಡಿದರು. ಇತ್ತೀಚಿನ .ದಿನಗಳಲ್ಲಿ ನಮ್ಮ ಮೇಲೆ ಶೋಷಣೆ, ದಬ್ಬಾಳಿಕೆ, ದೌರ್ಜನ್ಯಗಳು ಅತಿಯಾಗುತ್ತಿದ್ದರೂ ನಮ್ಮನ್ನು ಅಳುವ ಸರಕಾಗಳು ಮಾತ್ರ ಕಣ್ಣಿದ್ದು ಕುರುಡರಂತೆ ವರ್ತೀಸುತ್ತಿರುವುದು ವಿಪರ್ಯಾಸ ನಾವು ಇನ್ನು ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಮುಂದುವರೆದರೆ ಮುಂದಿನ ಪೀಳಿಗೆಯ ನಮ್ಮ ಸಮುದಾಯದಕ್ಕೆ ದೊಡ್ಡ ಮಾರಕವಾಗಲಿದೆ ನಮಗೆ ಶಿಕ್ಷಣ ಹಾಗೂ ಮೂಲಭೂತ
ಸೌಕರ್ಯಗಳಿಂದ ವಂಚಿತರಾಗಲು ಮೂಲ ಹೊಣೆಗಾರಿಕೆಗೆ ನಾವೆ ಕಾರಣ ಡಾ!! ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ದೇಶಕ್ಕೆ ತಂದು ಕೊಟ್ಟ ಸಂವಿದಾನದ ಫಲವನ್ನು ಪಡೆಯುವುದರೊಂದಿಗೆ ಸಂಘಟಿತರಾಗ ಬೇಕು ನಾವು ನಮ್ಮ ಸಮಾಜದ ಅಭಿವೃದ್ಧಿಗಾಗಿ ಸಂಘಟನೆಯನ್ನು ಬಲಗೊಳಿಸಲು ಎಲ್ಲರೂ ಕೂಡ ಕೈ ಜೋಡಿಸುವ ಮೂಲಕ ವಿಶ್ವ ಜ್ಣಾನಿ ಅಂಬೇಡ್ಕರ್ ಕಂಡ ಕನಸು ಪ್ರಭುದ್ದ ಭಾರತದ ಪ್ರಜೆಗಳಲ್ಲಿ ನಾವು ಕೂಡ ಭಾಗಿಯಾಗ ಬೇಕು. ದೇಶ ಕಟ್ಟಿದ ಮೂಲ ನಿವಾಸಿಗಳಾದ ನಾವು ಶೋಷಿತರ ಬದುಕಿನಿಂದ ಹೊರ ಬರಲು ಶಿಕ್ಷಣ, ಸಂಘಟನೆ ಹೋರಾಟ ದೊಂದಿಗೆ ಬೈರ ಸಮುದಾಯದ ನಿರ್ಮಾಣ ವೇದಿಕೆ ಸಂಘಟನೆ ಬಲಿಷ್ಠವಾಗಿ ದಲಿತ ಸಮೂದಯಗಳ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಖಂಡಿಸುವುದರೊಂದಿಗೆ ನಾವೆಲ್ಲರೂ ಸಂಘಟನೆ ಕಟ್ಟುವಲ್ಲಿ ಒಗ್ಗೂಡುವಂತೆ ಕರೆ ನೀಡಿದರು.
ಸತ್ಯನಾರಾಯಣ ಕರ್ಮಲ ಇವರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಹರೀಶ್ ಕರ್ಮಲ,ಸತೀಶ್ ಕರ್ಮಲ,
ವೇಣುಗೋಪಾಲ ಕರ್ಮಲ,ನಿಶಾಂತ್ ಆರ್. ಕೆ
ಪ್ರಮೋದ್, ರಾಜಣ್ಣ ಕರ್ಮಲ,ರಾಘವ ಕರ್ಮಲ ,ರಾಜೇಶ್ ಕರ್ಮಲ,ಮುರಳಿ ಕರ್ಮಲ,ಶರತ್ ಕೆ. ಎಸ್ .ದೀಕ್ಷಿತ್ ಕರ್ಮಲ,ಶಶಾಂಕ್ ಕರ್ಮಲ ಚೇತನ್ ಕರ್ಮಲ, ಚಿಂತನ್ ಕರ್ಮಲ, ರಾಧಾಕೃಷ್ಣ ಕರ್ಮಲ ಸನತ್ ಕರ್ಮಲ,ಹರ್ಷಿತ್ ಕರ್ಮಲ ಹಾಗು ವಿದ್ಯಾರ್ಥಿ ಸಮೂಹ ಮತ್ತು ಸಮಾಜ ಭಾಂದವರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸತೀಶ್ ಕರ್ಮಲ ಧನ್ಯವಾದ ಸಮರ್ಪಣೆ ಮಾಡಿದರು.