ವಿಟ್ಲ ದಲಿತ ಯುವತಿಯ ಮೇಲೆ ದೌರ್ಜನ್ಯ ಆರೋಪ : ದಲಿತ ದೌರ್ಜನ್ಯಕಾಯ್ದೆಯಡಿ ಪ್ರಕರಣದಾಖಲಿಸುವಂತೆ ನಾಗರಾಜ್ ಎಸ್ ಲೃಾಲ ಒತ್ತಾಯ* | ಜನಧ್ವನಿ
ಜಿಲ್ಲಾ ವಾರ್ತೆ

ವಿಟ್ಲ ದಲಿತ ಯುವತಿಯ ಮೇಲೆ ದೌರ್ಜನ್ಯ ಆರೋಪ : ದಲಿತ ದೌರ್ಜನ್ಯಕಾಯ್ದೆಯಡಿ ಪ್ರಕರಣದಾಖಲಿಸುವಂತೆ ನಾಗರಾಜ್ ಎಸ್ ಲೃಾಲ ಒತ್ತಾಯ*

ಬಂಟ್ವಾಳ ತಾಲೂಕಿನ ಕಾಡುಮಠ ಎಂಬಲ್ಲಿ
ದಲಿತ ಯುವತಿಯ ಮೇಲೆ ಅನ್ಯ ಜನಾಂಗದ ಯುವಕನೊರ್ವನಿಂದ ನಡೆದ ದೌರ್ಜನ್ಯ ಪ್ರಕರಣದಲ್ಲಿ ನೊಂದ ಯುವತಿಯ ಮನೆಗೆ ಮಹಿಳಾ ಮತ್ತು ಮಕ್ಕಳ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗು ಕೊಳ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಬೇಟಿ ನೀಡಿ ಮಾಹಿತಿಯನ್ನು ಪಡೆಕೊಂಡು ವಿಟ್ಲ ಪೋಲಿಸ್ ಠಾಣೆಗೆ ದೂರು ನೀಡಿ ಪೋಸ್ಕೊ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಾದರೂ, ಸಹ ದಲಿತ ದೌರ್ಜನ್ಯ ಕಾಯ್ಧೆಯಡಿಯಲ್ಲಿ ಪ್ರಕರಣ ದಾಖಲಾಗದಿರುವ ಬಗ್ಗೆ ವಿಷಯ ತಿಳಿದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ತಾಲೂಕು ಸಮಿತಿ ಸದಸ್ಯ ‌ನಾಗರಾಜ್ ಎಸ್‌ ಲೃಾಲ ಬೆಳ್ತಂಗಡಿ ನೊಂದ ಯುವತಿಯ ಮನೆಗೆ ತೆರಳಿ ನಂತರ ಸಂತ್ರಸ್ಥೆಯ ಮನೆಯವ
ರೊಂದಿಗೆ ವಿಟ್ಲ ಪೋಲಿ
ಸ್ ಠಾಣೆಗೆ ಹೋಗಿ ಇಲಾಖಾಧಿಕಾರಿಗಳನ್ನು ಮತ್ತು ಠಾಣೆಗೆ ದೂರು ನೀಡಿದ ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ
ಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ತಾರತಮ್ಯವನ್ನು ಎಸಗಲಾಗಿದೆ ಎಂದು ತರಾಟೆಗೆ ತೆಗೆದುಕೊಂಡ ಪ್ರಸಾಂಗ ನಡೆಯಿತು.
ನೊಂದ ಯುವತಿಗೆ ನ್ಯಾಯ ಒದಗಿಸುವ ಬದಲಾಗಿ ಅನ್ಯಾಯದ ಎಸಗಲಾಗಿದೆ ಎಂದು ಜಿಲ್ಲಾವರಿಷ್ಠಧಿಕಾರಿ ಹಾಗು ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿಯವರನ್ನು ಮೌಖಿಕವಾಗಿ ಸಂಪರ್ಕಿಸಿ ಎದ್ರಿಯವರಯ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆಯಲ್ಲಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದರು.
‌ತಪ್ಪಿದ್ದಲ್ಲಿ ಕೊರಾನ ಲಾಕ್ ಡೌನ್ ನನ್ನು‌ ಲೆಕ್ಕಿಸದೆ ನ್ಯಾಯದ ಪರ ‌ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಸಿದರು. ಸದ್ರಿ ಪ್ರಕರಣ ಗಂಭೀರವಾಗಿ ಪರಿಗಣಿಸಿ ಎದ್ರಿಯವರ ವಿರುದ್ಧ ದಲಿತ ದೌರ್ಜನ್ಯ ಕಾಯಿದೆಯಡಿಯಲ್ಲಿ ಪ್ರಕರಣವನ್ನು ದಾಖಲಿಸುವುದಾಗಿ ವಿಟ್ಲ ಉಪ ನೀರಿಕ್ಷಕರು ಭರವಸೆ ನೀಡಿರುತ್ತಾರೆ ಎಂದು ನಾಗರಾಜ್ ಎಸ್ ..ಲಾಯಿಲ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ