ಕ್ರೈಂ ವಾರ್ತೆ

ಮುಂಡಾಜೆ ಬಳಿ ಬೈಕ್ ಸ್ಕಿಡ್: ನೆರಿಯ ಅಣಿಯೂರಿನ ಯುವಕ ಮೃತ್ಯು

ಮುಂಡಾಜೆ: ಇಲ್ಲಿ ಯ ದುರ್ಗಾಪರಮೇಶ್ವರಿ ದೇವಸ್ಥಾನದ ತಿರುವು ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಸವಾರ ಮೃತಪಟ್ಟಿರುವ ಘಟನೆ ನ.23 ರಂದು ರಾತ್ರಿ ವೇಳೆ ನಡೆದಿದೆ.

ನೆರಿಯ ಗ್ರಾಮದ ಅಣಿಯೂರಿನ ಪಾದೆಗುಡ್ಡೆ ನಿವಾಸಿ ನೋಣಯ್ಯ ಗೌಡರ ಪುತ್ರ ಪ್ರದೀಪ್ (22ವ) ಈ ದುಘ೯ಟನೆಯಲ್ಲಿ ಮೃತಪಟ್ಟ ನತದೃಷ್ಟ ರಾಗಿದ್ದಾರೆ.

ತಮ್ಮ ಸಂಬಂಧದ ಮನೆಯಲ್ಲಿ ನಡೆಯುವ ಶುಭ ಕಾರ್ಯಕ್ರಮದ ಹಿನ್ನಲೆಯಲ್ಲಿ ರಾತ್ರಿ ವೇಳೆ ಅಲ್ಲಿಗೆ ಹೋಗುತ್ತಿರುವ ಸಮಯ ಈ ಘಟನೆ ಸಂಭವಿಸಿದೆ.
ಈ ಪ್ರದೇಶದ ರಸ್ತೆಯು ಅಪಾಯಕಾರಿ ತಿರುವು ಆಗಿದ್ದು, ಈ ಹಿಂದೆ ಕೂಡ ಇಲ್ಲಿ ಹಲವಾರು ಭಾರಿ ಅಪಘಾತ ಮತ್ತು ಪ್ರಾಣಹಾನಿ ಸಂಭವಿಸಿದೆ. ಪ್ರದೀಪ್ ಅವರು ಚಲಾಯಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಕಲ್ಲಿನ ಕಂಬಕ್ಕೆ ಡಿಕ್ಕಿ ಹೊಡೆದು ಈ ದುಘ೯ಟನೆ ನಡೆದಿದೆ ಎನ್ನಲಾಗಿದೆ.

ನಿಮ್ಮದೊಂದು ಉತ್ತರ