ಐವರು ಪ್ರವಾಸಿಗರು ಅಪಾಯದಿಂದ ಪಾರು
ಚಾಲಕನ ನಿಯಂತ್ರಣ ತಪ್ಪಿ ದುಘ೯ಟನೆ
ಚಾರ್ಮಾಡಿ: ಕೋಲಾರದಿಂದ ಧರ್ಮಸ್ಥಳ ಕ್ಕೆ ಬರುತ್ತಿದ್ದ ಪ್ರವಾಸಿಗರ ಇನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ನ.21ರಂದು ಚಾರ್ಮಾಡಿ ಘಾಟ್ ನ ಮಲಯ ಮಾರುತ ಬಳಿ ನಡೆದಿದೆ.
20 ಅಡಿ ಪ್ರಪಾತಕ್ಕೆ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಐದು ಮಂದಿ ಪ್ರವಾಸಿಗರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.