ನಾರಾವಿ : ಇಲ್ಲಿಯ ಅರಸಿಕಟ್ಟೆ ಶಿವಪ್ರಭಾ ರವರ ಮನೆಗೆ 4 ಮಂದಿ ದರೋಡೆ ಕೋರರು ಏಕಾಏಕಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ನಗ-ನಗದನ್ನು ಕಳವುಗೈದಿರುವ ಬಗ್ಗೆ ನ.12ರಂದು ವರದಿಯಾಗಿದೆ.
ಮನೆಯಲ್ಲಿ ಒಬ್ಬಂಟಿಯಾಗಿರುವ ಸಮಯ ಮಹಿಳೆಯ ಕೈಗಳನ್ನು ಮತ್ತು ಕಾಲುಗಳನ್ನು ಹಗ್ಗದಿಂದ ಕಟ್ಟಿ ಕುತ್ತಿಗೆಯಲ್ಲಿದ್ದ ಒಂದು ಚಿನ್ನದ ಸರ, ಕಿವಿಯಲ್ಲಿದ್ದ ಒಂದು ಜೊತೆ ಬೆಂಡೋಲೆಯನ್ನು ಬಲಾತ್ಕಾರವಾಗಿ ತೆಗೆದು, ದರೋಡೆ ಕೋರರು ಪರಾರಿಯಾಗಿದ್ದಾರೆ.
ಮಹಿಳೆ ಕೊಸರಾಡಿಕೊಂಡು ತನ್ನ ಕೈಗೆ ಮತ್ತು ಕಾಲಿಗೆ ಕಟ್ಟಿದ ಹಗ್ಗವನ್ನು ಬಿಡಿಸಿಕೊಂಡು ತನ್ನ ಸಂಬಂಧಿಕರಿಗೆ ದೂರವಾಣಿ ಕರೆ ಮಾಡಿ ತಿಳಿಸಿ ಅವರು ಬಂದ ಬಳಿಕ ಮನೆಯ ಒಳಗೆ ಹೋಗಿ ನೋಡಲಾಗಿ ಬೆಡ್ ರೂಮ್ ನಲ್ಲಿ ಬೆಡ್ ನ ಕೆಳಗೆ ಇರಿಸಿದ್ದ 3 ಚಿನ್ನದ ಬಳೆಗಳು,3 ಚಿನ್ನದ ಉಂಗುರಗಳು, ಮೂರು ಎಲೆಯ ಚಿನ್ನದ ಚೈನ್ ಹಾಗೂ ಒಂದು ಮೊಬೈಲ್ ಕೂಡಾ ದೋಚಿರುವುದು ಕಂಡು ಬಂದಿರುತ್ತದೆ. ಆರೋಪಿತರು ದೋಚಿದ ಚಿನ್ನದ ಅಂದಾಜು ಮೌಲ್ಯ ಒಟ್ಟು 4,60,000 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ವೇಣೂರು ಪೊಲೀಸರಿಗೆ ದೂರು ನೀಡಲಾಗಿದೆ.