ಕ್ರೈಂ ವಾರ್ತೆ

ತುಳುನಾಡಿನ ಕಾರಣಿ ದೈವ ಬಂಟ್ವಾಳ ವೀರಕಂಬದ ಕೇಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿ ಕಳವು

ದೈವಸ್ಥಾನದ ಕಟ್ಟೆಯ ಬಳಿ ಇರಿಸಿದ್ದ ಕಾಣಿಕೆ ಡಬ್ಬಿಯನ್ನು ದೋಚಿದ ಕಳ್ಳರು

ವಿಟ್ಲ : ತುಳುನಾಡಿನ ಕಾರಣಿ ದೈವ ಕ್ಷೇತ್ರಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಕೇಲಿಂಜ ಶ್ರೀ ಉಳ್ಳಾಲ್ತಿ ಕ್ಷೇತ್ರದ ಕಾಣಿಕೆ ಡಬ್ಬಿಯನ್ನು ಕಳ್ಳರು ದೋಚಿದ ಘಟನೆ ಅ.8 ರಂದು ರಾತ್ರಿ ನಡೆದಿದೆ.

ದೈವಸ್ಥಾನದ ಕಟ್ಟೆಯ ಬಳಿ ಇರಿಸಿದ್ದ ಕಾಣಿಕೆ ಡಬ್ಬಿಯನ್ನು ನಿನ್ನೆ ರಾತ್ರಿ ಕದ್ದೊಯ್ಯಲಾಗಿದೆ. ಇತಿಹಾಸ
ಪ್ರಸಿದ್ಧವಾಗಿರುವ ಈ ದೈವ ಸ್ಥಾನಕ್ಕೆ ಅಪಾರ ಭಕ್ತರಿದ್ದಾರೆ.ಇದರ ಮುಂಭಾಗ ವಾಹನಗಳಲ್ಲಿ ಅಥಾವ ಪಾದಚಾರಿಗಳು ಹೋಗುವಾಗ ದೈವಸ್ಥಾನದ ಕಾಣಿಕೆ ಡಬ್ಬಿಗೆ ಕಾಣಿಕೆ ಹಾಕುವ ವಾಡಿಕೆಯನ್ನು ಭಕ್ತರು ಇಟ್ಟುಕೊಂಡಿದ್ದಾರೆ. ಇದರ ಅರಿವಿದ್ದ ಕಳ್ಳರು ಹಣ ಲಪಟಾಯಿಸುವ ಉದ್ದೇಶದಿಂದ ಕಾಣಿಕೆ ಡಬ್ಬಿ
ಎಗರಿಸಿದ್ದಾರೆ.
ಕೇಲಿಂಜ ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯುವ ಮೆಚ್ಚಿ ಜಾತ್ರೆ ನಡೆಯುತ್ತಿದ್ದು, ಇದರಲ್ಲಿ ಭಾಗವಹಿಸಲು ಬೇರೆ ಬೇರೆ ಊರಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಬೆಂಜೆಂತಿಮಾರ್ ಗುತ್ತು ಮೂಲ ಭಂಡಾರದ ಮನೆಯಿಂದ ಮೆಚ್ಚಿ ಜಾತ್ರೆಯ ಹಿಂದಿನ ದಿನ ಉಲ್ಲಾಳಿಯ ಭಂಡಾರ ಆಗಮಿಸುತ್ತದೆ. ಆಗ ಊರಿನವರು ತಮ್ಮಮನೆಗಳಿಗೆ ಬಾಗಿಲು ಹಾಕದೆ ಉಲ್ಲಾಳಿಯ ಭಂಡಾರ ಹೋಗುವ ಧರ್ಶನ ಪಡೆಯುತ್ತಾರೆ ಎಂಬ ಪ್ರತೀತಿ ಇದೆ. ಅಂಥಾ ಕಾರಣೀಕ ಶಕ್ತಿಯ ಕಾಣಿಕೆ ಡಬ್ಬಿ ಕದಿಯುವವ ದುಸ್ಸಾಹಸ ಮಾಡಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.

ನಿಮ್ಮದೊಂದು ಉತ್ತರ