ಕ್ರೈಂ ವಾರ್ತೆ

ಮಂಗಳೂರು : ಖಾಸಗಿ ಸರ್ವಿಸ್ ಬಸ್ಸು ಓವರ್ ಟೆಕ್ ಮಾಡುವ ವೇಳೆ ಅಪಘಾತ – ಬಾಲಕನ ತಲೆ ಮೇಲೆ ಚಕ್ರ ಹರಿದು ಮೃತ್ಯು

ಮಂಗಳೂರು : ಖಾಸಗಿ ಬಸ್ಓವರ್ ಟೆಕ್ ಮಾಡುವಸಂದರ್ಭ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ನ ಹಿಂಬಂದಿ ಸವಾರ 12ವರ್ಷದ ಬಾಲಕ ಧಾರುಣವಾಗಿ ಮೃತಪಟ್ಟ ಘಟನೆ ಮಂಗಳೂರಿನ ಲಾಲ್‌ಬಾಗ್ ಜಂಕ್ಷನ್ ಬಳಿಸೋಮವಾರ ನಡೆದಿದೆ.

ಮಂಗಳೂರು ಹೊರ ವಲಯದ ಪಡೀಲ್ ಕಣ್ಣೂರು ನಿವಾಸಿ ಹಾಗೂ ಹೈಸ್ಕೂಲ್ ವಿದ್ಯಾರ್ಥಿ ರಕ್ಷಣೆ(12ವ) ಮೃತ ಬಾಲಕ, ಬಾಲಕನ ತಲೆ ಮೇಲೆ ಬಸ್ಸಿನ ಚಕ್ರ ಹರಿದು ಹೋಗಿ ಸಾವು ಸಂಭವಿಸಿದೆ. ಖಾಸಗಿ ಬಸ್ಸು  ‌  ಓ‌ವರ್ ಟೇಕ್ ಮಾಡುವ ಭರದಲ್ಲಿ ಬಂದು ದ್ವಿಚಕ್ರ ವಾಹನ ಸವಾರರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಬಾಲಕ ತನ್ನ ಸಂಬಂಧಿ ನಾರಾಯಣ್ ಅವರೊಂದಿಗೆ ಸ್ಕೂಟರ್‌ನಲ್ಲಿ ಸಹ ಸವಾರನಾಗಿ ಪ್ರಯಾಣಿಸುತ್ತಿದ್ದಾಗ ಖಾಸಗಿ ಸರ್ವಿಸ್ ಲಾಲ್‌ಬಾಗ್ ಜಂಕ್ಷನ್ ಬಳಿ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಸವಾರ ನಾರಾಯಣ್ ಸ್ಕೂಟರಿನಿಂದ ಎಡಬದಿಗೆ ಬಿದ್ದಿದ್ದಾರೆ. ಬಾಲಕ ರಕ್ಷಣ್ ಬಲ ಬದಿಗೆ ಬಿದ್ದಿದ್ದಾನೆ. ಇದೇ ವೇಳೆ ಖಾಸಗಿ ಬಸ್‌ನ ಹಿಂಬದಿಯ ಚಕ್ರ ಹಾದು ಹೋದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಚಾಲಕ ಇನ್ನೊಂದು ಬದಿಗೆ ಬಿದ್ದ ಕಾರಣ ಪ್ರಾಣಾಪಯದಿಂದ ಪಾರಾಗಿದ್ದಾರೆ.
ಮೃತ ಬಾಲಕ ರಕ್ಷಣ್ ಕಪಿತಾನಿಯೋ ಸ್ಕೂಲಿನಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಯಾಗಿದ್ದ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡಿದ್ದು ಬಸ್ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ” ಎಂದು ಮಂಗಳೂರು ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಇನ್ಸ್‌ಪೆಕ್ಟರ್ ಜಯಾನಂದ್ ತಿಳಿಸಿದ್ದಾರೆ.

ನಿಮ್ಮದೊಂದು ಉತ್ತರ