ಬಂಟ್ವಾಳ: ಬಿಸಿರೋಡಿನ ಹೃದಯ ಭಾಗದ ಅಂಗಡಿಯೊಂದರಿಂದ ಹಾಡುಹಗಲೇ ಕ್ಯಾಶ್ ಡ್ರಾಯರ್ ಗೆ ಕೈ ಹಾಕಿ ಹಣ ಕಳ್ಳತನ ಮಾಡಿರುವ ದೃಶ್ಯವೊಂದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.
ಬಂಟ್ವಾಳ ತಾಲೂಕು ಆಡಳಿತ ಕೇಂದ್ರ (ಮಿನಿ ವಿಧಾನ ಸೌಧದ ಕಚೇರಿ) ಮುಂಭಾಗದಲ್ಲಿರುವ ಎಸ್.ಆರ್.ಟಯರ್ ಮಾಲಕ ಸಂದೀಪ್ ಅವರ ಅಂಗಡಿಯಿಂದ ಕಳ್ಳನೋರ್ವ ಹಣ ಎಗರಿಸುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.
ಅಕ್ಟೋಬರ್ 11 ರಂದು ಸುಮಾರು 12 ಗಂಟೆಯ ವೇಳೆಗೆ ಮಾಲಕ ಸಂದೀಪ್ ಅವರ ಅಂಗಡಿ ಮುಂಬಾಗದಲ್ಲಿ ಕಾರೊಂದು ನಿಲ್ಲಿಸಿ ಬಂದರೆ ಆತನನ್ನು ಬದಿಗೆ ನಿಲ್ಲಿಸುವಂತೆ ತಿಳಿಸಲು ಅಂಗಡಿಯಿಂದ ತೆರಳಿದ ಸಮಯದಲ್ಲಿ ಸರಿಯಾಗಿ ಉಪಯೋಗಿಸಿ ಕಳ್ಳ ಅಂಗಡಿ ಒಳಗೆ ನುಗ್ಗಿ, ಕ್ಯಾಶ್ ಡ್ರಾಯರ್ ಓಪನ್ ಮಾಡಿ ಸುಮಾರು 10 ಸಾವಿರ ಹಣವನ್ನು ದೋಚಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ.ಸಂದೀಪ್ ಹೊರಗೆ ಅಡ್ಡ ಇಟ್ಟಿದ್ದ ಕಾರನ್ನು ತೆರೆಯಲು ತಿಳಿಸಿ ವಾಪಾಸು ಬಂದು ಕ್ಯಾಸ್ ಡ್ರಾಯರ್ ಓಪನ್ ಆಗಿದ್ದು, ಸಂಶಯಗೊಂಡು ನೋಡಿದಾಗ ನಗದು ಹಣ ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಸಿ.ಸಿ.ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಳವಾದ ಬಗ್ಗೆ.