ಕ್ರೈಂ ವಾರ್ತೆ

ನಿಡ್ಲೆ ಗ್ರಾಮದ ಬರೆಂಗಾಯದಲ್ಲಿ ಜೀಪ್ ಪಲ್ಟಿ: ಐವರು ಪ್ರಯಾಣಿಕರಿಗೆ ಗಾಯ

ಬೆಳ್ತಂಗಡಿ : ಕಾರ್ಯತಡ್ಕ ಕಡೆಯಿಂದ ಕುದ್ರಾಯ ಕಡೆಗೆ ಬರುತ್ತಿದ್ದ   ಜೀಪೊಂದು  ಚಾಲಕನ ನಿಯಂತ್ರಣ ಕಳೆದುಕೊಂಡು ಮಗುಚಿ ಬಿದ್ದು , ಐದು ಮಂದಿ ಪ್ರಯಾಣಿಕರು ಗಾಯಗೊಂಡ ಘಟನೆ ಇಂದು ಮಧ್ಯಾಹ್ನ ನಿಡ್ಲೆಯಲ್ಲಿ ನಡೆದಿದೆ.

ನೆರಿಯ ಗ್ರಾಮದ ಪಿಲಿಕುಳ ನಿವಾಸಿ ಮಂಜಪ್ಪ ಎಂಬವರು ಸರ್ವಿಸ್‌ ಜೀಪಿನಲ್ಲಿ ಸಂಬಂಧಿಕರಾದ,‌ ತಮ್ಮ ಗುರುವ, ತಮ್ಮನ ಹೆಂಡತಿ ಯಮುನಾ, ತಮ್ಮನ ಮಕ್ಕಳಾದ ಸಂತೋಷ, ಹಾಗೂ ಸಾಮು ಎಂಬವರೊಂದಿಗೆ ಕಾರ್ಯತಡ್ಕ ಕಡೆಯಿಂದ ಕುದ್ರಾಯ ಕಡೆಗೆ ಜೀಪ್ ನಲ್ಲಿ‌ ಬರುತ್ತಿದ್ದಾಗ ಮಧ್ಯಾಹ್ನ 2.15 ಗಂಟೆಗೆ ಬೆಳ್ತಂಗಡಿ ತಾಲೂಕು,ನಿಡ್ಲೆ ಗ್ರಾಮದ ಬರಂಗಾಯ ಎಂಬಲ್ಲಿಗೆ ತಲುಪುತ್ತಿದ್ದಂತೆ  ಚಾಲಕ ರಾಜೇಶ್‌ ರವರ ಚಾಲನಾ ಹತೋಟಿ ತಪ್ಪಿ ಮಗಚಿ ಬಿದ್ದು ಪ್ರಯಾಣಿಕರಾದ ಮಂಜಪ್ಪರಿಗೆ   ಸೊಂಟಕ್ಕೆ , ಬಲ ಕೈಗೆ ಗುದ್ದಿದ ಗಾಯ, ಗುರುವ ರವರಿಗೆ ಕುತ್ತಿಗೆಗೆ ,ಹೊಟ್ಟೆಗೆ ಗುದ್ದಿದ ಗಾಯ, ಯಮುನಾರವರಿಗೆ ತಲೆಗೆ ಗುದ್ದಿದ ಗಾಯ,ಸಂತೋಷ ರವರಿಗೆ ಎಡ ಕಾಲಿನ ಮೊಣಗಂಟಿಗೆ ಗುದ್ದಿದ ಗಾಯಗೊಂಡು ಚಿಕಿತ್ಸೆ ಬಗ್ಗೆ ಉಜಿರೆ ಎಸ್‌ ಡಿ ಎಂ ಆಸ್ಪತ್ರೆಯಲ್ಲಿ ಹಾಗೂ ಜೀಪು ಚಾಲಕ ರಾಜೇಶರವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಈ ಬಗ್ಗೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆ ಅ.ಕ್ರ: 120/2022 ಕಲಂ 279,337 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ.

ನಿಮ್ಮದೊಂದು ಉತ್ತರ