ವಿಟ್ಲ: ತೆಂಗಿನಕಾಯಿ ಕೀಳುವಾಗಅಲ್ಯೂಮಿನಿಯಂ ಕೊಕ್ಕೆ ವಿದ್ಯುತ್ ತಂತಿಗೆ ತಾಗಿ ಶಾಕ್ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ದಾರುಣ ಘಟನೆ ಕೇಪು ಗ್ರಾಮದ ನೀರ್ಕಜೆಯಲ್ಲಿ ನಡೆದಿದೆ.
ಮೃತರನ್ನು ಕೇಪು ನೀರ್ಕಜೆ ನಿವಾಸಿ ಶೀನ ಗೌಡ(58) ಎಂದು ಗುರುತಿಸಲಾಗಿದೆ. ಶೀನ ಗೌಡ ಅವರು ವಿಟ್ಲದ ಕೂಡೂರು ಮೂಲದವರಾಗಿದ್ದು, ಸದ್ಯ ನೀರ್ಕಜೆಯಲ್ಲಿ ವಾಸವಾಗಿದ್ದರು. ನೆರೆಮನೆಯ ಅಲ್ಯೂಮಿನಿಯಂ ಕೊಕ್ಕೆ ಬಳಸಿ ತೆಂಗಿನಕಾಯಿ ಕೀಳುತ್ತಿರುವಾಗ ವಿದ್ಯುತ್ ತಗುಲಿದ ಪರಿಣಾಮ ಸ್ಥಳದಲ್ಲಿಯೇ ಅವರು ಸಾವನ್ನಪ್ಪಿದರು ಎಂದು ತಿಳಿದು ಬಂದಿದೆ