ಕ್ರೈಂ ವಾರ್ತೆ

ನೆಲ್ಯಾಡಿ: ಕಾರಿನಲ್ಲಿ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ – ಹೊತ್ತಿ ಉರಿದ ಕಾರು

ನೆಲ್ಯಾಡಿ: ಕಾರೊಂದರ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಹೊತ್ತಿ ಉರಿದ ಘಟನೆ ಕಾರಣ ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ನಡೆದಿದೆ.

ನೆಲ್ಯಾಡಿಯ ಸಮೀಪದ ಗೋಳಿತೊಟ್ಟು ಸರಕಾರಿ ಶಾಲೆಯ ಬಳಿ ಘಟನೆ ಸಂಭವಿಸಿದೆ.ಕಾರಿನಲ್ಲಿ ಪುತ್ತೂರು ಮೂಲದ ಗೋಕುಲದಾಸ್ ಮತ್ತು ಮೆಲ್ವಿನ್ ಎಂಬವರು ಬೆಂಗಳೂರಿನಿಂದ ತಮ್ಮ ಊರಿಗೆ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಾರಿನ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಮುಂಭಾಗ ಹೊತ್ತಿ ಉರಿದಿದೆ.
ಈ ದುರ್ಘಟನೆಯಲ್ಲಿ ಪ್ರಯಾಣಿಕರಿಬ್ಬರೂ ಅದೃಷ್ಟವಶಾತ್
ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನೆಲ್ಯಾಡಿ ಹೊರಠಾಣ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮದೊಂದು ಉತ್ತರ