ಕ್ರೈಂ ವಾರ್ತೆ

ನೆಲ್ಯಾಡಿಯ ಕಾನ್ವೆಂಟ್‌’ಗೆ ಅಕ್ರಮವಾಗಿ ಪ್ರವೇಶಿಸಿ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ -ಇಬ್ಬರ ಬಂಧನ

ನೆಲ್ಯಾಡಿ : ಸೆ 29: ಕಾನ್ವೆಂಟ್‌ಗೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆಗೆ ಯತ್ನಿಸಿದ ಆರೋಪದಲ್ಲಿ ಇಬ್ಬರು ಆರೋಪಿಗಳನ್ನು ಉಪ್ಪಿನಂಗಡಿ ಪೊಲೀಸರು ಸೆ 28 ರಂದು ಬಂಧಿಸಿದ್ದಾರೆ.

ಕಡಬ ತಾಲೂಕಿನ ಪೇರಡ್ಕ ನಿವಾಸಿಗಳಾದ ಸದಾಂ ಹಾಗೂ ಇಸ್ಮಾಯಿಲ್ ಬಂಧಿತ ಆರೋಪಿಗಳಾಗಿದ್ದಾರೆ. ಇವರು ಸೆ.27 ರಂದು ಸಂಜೆ ನೆಲ್ಯಾಡಿಯಲ್ಲಿರುವ ಬೆಥನಿ ಕಾನ್ವೆಂಟ್‌ಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ದೂರಲಾಗಿದೆ.
ಸಂಜೆ ವೇಳೆ ಇವರನ್ನು ಕಾನ್ವೆಂಟ್ ಬಳಿ ನೋಡಿದ ಅಲ್ಲಿನ ಸಿಸ್ಟರ್ ಪರಿಮಳರವರು, ಈ ಸಮಯಕ್ಕೆ ನೀವು ಇಲ್ಲಿಗೆ ಯಾಕೆ ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದನ್ನು ಕೇಳಲು ನೀನು ಯಾರು, ನಾವು ಯಾವಾಗ ಬೇಕಾದರೂ ಬರುತ್ತೇವೆ ಎಂಬುದಾಗಿ ಹೇಳಿ ಅವಾಚ್ಯವಾಗಿ ಬೈದಿದ್ದಾರೆ ಎಂದು ಆರೋಪಿಸಲಾಗಿದೆ.

ನಿಮ್ಮದೊಂದು ಉತ್ತರ