ಕ್ರೈಂ ವಾರ್ತೆ

ತೊಕ್ಕೊಟ್ಟು: ನಿಯಂತ್ರಣ ತಪ್ಪಿದ ಬೈಕ್ ಬ್ಯಾರಿಕೇಡ್‌ಗೆ ಡಿಕ್ಕಿ: ಸ್ಥಳದಲ್ಲೇ ಸಾವನ್ನಪ್ಪಿದ ಬೈಕ್ ಸವಾರ

ತೊಕ್ಕೊಟ್ಟು: ಬೈಕೊಂದು ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿದ್ದ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದಿದೆ. ಇದ್ರಿಂದ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಮೀನು ಸಾಗಾಟದ ಕ್ಯಾಂಟರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ತೊಕ್ಕೊಟ್ಟು ಬೈಪಾಸ್ ಎಂಬಲ್ಲಿ ಇಂದು ನಡೆದಿದೆ.

ಕಾಸರಗೋಡು ಜಿಲ್ಲೆಯ, ಕುಂಬಳೆ ಉಲ್ಲೋಡಿ ನಿವಾಸಿ ನಿತಿನ್ ಮಾನ್ಯ (27) ಮೃತಪಟ್ಟ ಯುವಕ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ.

ನಿಮ್ಮದೊಂದು ಉತ್ತರ