ಕ್ರೈಂ ವಾರ್ತೆ

ತೆಂಕಕರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು: ಕಾಣಿಕೆ ಹಣ ಸಹಿತ ಬೆಲೆಬಾಳುವ ಸೊತ್ತುಗಳ ಕಳವು

ತೆಂಕಕಾರಂದೂರು : ಇಲ್ಲಿಯ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಕ್ಕೆ ಕಳ್ಳ ರು ನುಗ್ಗಿ ಕಾಣಿಕೆ ಡಬ್ಬಿಯಲ್ಲಿದ್ದ ಹಣ, ಸಿ ಸಿ. ಟಿ ವಿ., ಡಿವಿಆರ್, ಮೊನಿಟರ್ ಸಹಿತ ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಅಪಹರಿಸಿದ ಪ್ರಕರಣ ಆ.23ರಂದು ರಾತ್ರಿ ನಡೆದಿದೆ.

ದೇವಾಲಯದ ಅರ್ಚಕರು ಆ.24 ಬೆಳಿಗ್ಗೆ ದೇವಸ್ಥಾನಕ್ಕೆ ಬಂದಾಗ ಬಾಗಿಲಿನ ಬಾಗಿಲು ತೆರೆದಿದ್ದು , ಸಂಶಯ ಬಂದು , ತಕ್ಷಣ ಆಡಳಿತ ಮಂಡಳಿಯ ಸದಸ್ಯರಿಗೆ ಮಾಹಿತಿ ನೀಡಿ, ಪರಿಶೀಲಿಸಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿತ್ತು.
ತಕ್ಷಣ ವೇಣೂರು ಠಾಣೆಗೆ ಮಾಹಿತಿ ನೀಡಿ ಕೂಡಲೇ ಆರಕ್ಷಕ ಠಾಣೆಯ ಠಾಣಾಧಿಕಾರಿ ಸೌಮ್ಯ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ , ಮಾಹಿತಿ ಸಂಗ್ರಹಿಸಿ ಪ್ರಕರಣ ದಾಖಲಿಸಿ ಕೊಂಡರು . ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕರೆಸಿ ತನಿಖೆ ನಡೆಸಲಾಗಿದೆ.
ಈ ಹಿಂದೆಯೂ ಇದೇ ದೇವಸ್ಥಾನ ದಲ್ಲಿ ಕಳ್ಳತನ ವಾಗಿ ದೇವರ ಉತ್ಸವ ಬಲಿಮೂರ್ತಿ ಇತರ ಅಮೂಲ್ಯ ವಸ್ತು ಗಳನ್ನು ಕಳವುಗೈದರೂ ಇದುವರೆಗೂ ಕಳ್ಳರ ಪತ್ತೆಯಾಗಿಲ್ಲ‌ ಅಲ್ಲದೆ ಇತ್ತೀಚೆಗೆ ಮುಂಡೂರು
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ನುಗ್ಗಿ ಕಳ್ಳತನ ನಡೆಸಲಾಗಿತ್ತು.

.

ನಿಮ್ಮದೊಂದು ಉತ್ತರ