ಸುಳ್ಯ: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳ ಬಂಧನವಾಗಿದೆ.
ಅಬಿದ್ (22), ನೌಫಾಲ್ (28) ಬಂಧಿತ ಆರೋಪಿಗಳಾಗಿದ್ದಾರೆ.
ಅಬಿದ್ ನಾವೂರು ನಿವಾಸಿ ಯಾಕೂಬ್ ಎಂಬವರ ಮಗ ನಾಗಿದ್ದು, ನೌಫಾಲ್ ಬೆಳ್ಳಾರೆಯ ಗೌರಿಹೊಳೆ ನಿವಾಸಿ ಮೊಹಮ್ಮದ್ ಎಂಬವರ ಪುತ್ರನಾಗಿದ್ದಾನೆ.
ಪ್ರವೀಣ್ ಹತ್ಯೆಯಲ್ಲಿ ಪ್ರಮುಖ ಆರೋಪಿಗಳಿಗೆ ನೆರವು ನೀಡಿದ ಹಿನ್ನೆಲೆಯಲ್ಲಿ ಬಂಧನವಾಗಿದ್ದು, ಈವರೆಗೆ ಪ್ರವೀಣ್ ಹತ್ಯೆ ಕೇಸ್ ನಲ್ಲಿ ಒಟ್ಟು ಆರು ಜನರನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ.