ಬೆಳ್ತಂಗಡಿ: ಉಜಿರೆ ಖಾಸಗಿ ಶಾಲೆಯ ಮಾಜಿ ಶಿಕ್ಷಕಿ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು (ಅ 4) ಬೆಳಿಗ್ಗಿನ ಜಾವ ಮುಂಡ್ರುಪಾಡಿಯಲ್ಲಿ ನಡೆದಿದೆ.
ಧರ್ಮಸ್ಥಳ ಗ್ರಾಮದ ಮುಂಡ್ರುಪ್ಪಾಡಿ ನಿವಾಸಿ ಚೈತ್ರಾ ಅಡಿಗ ಆತ್ಮಹತ್ಯೆ ಮಾಡಿಕೊಂಡವರಗಿದ್ದಾರೆ .
ಇವರು ಗುರುವಾರ ಮುಂಜಾನೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.
ಚೈತ್ರಾ ಅವರು ಪತಿ ದೀಪಕ್ ಹಾಗೂ ಒಂದು ಹೆಣ್ಣು ಮಗುವನ್ನು ಅಗಲಿದ್ದಾರೆ.