ಕ್ರೈಂ ವಾರ್ತೆ

ಗುರುವಾಯನಕೆರೆಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಓಮ್ನಿ ಡಿಕ್ಕಿ ಹೊಡೆದು ಪರಾರಿ: ಮಹಿಳೆಗೆ ಗಾಯ

ಗುರುವಾಯನಕೆರೆ: ದ.ಕ. ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯೆ ಪುತ್ತೂರಿನ ಬೊಳ್ವಾರ್ ನಿವಾಸಿ ಕಸ್ತೂರಿಯವರು ಗುರುವಾಯನಕೆರೆಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಓಮ್ಮಿಯೊಂದು ಅತೀ ವೇಗದಲ್ಲಿ ಬಂದು ಇವರ ಕೈಗೆ ತಾಗಿ ವಾಹನ ನಿಲ್ಲಿಸದೇ ಪರಾರಿಯಾದ ಘಟನೆ ಜು. 22ರಂದು ನಡೆದಿದೆ.

ಕಸ್ತೂರಿಯವರು ಗುರುವಾಯನಕೆರೆ ಜಂಕ್ಷನ್ ನಲ್ಲಿ ರಸ್ತೆ ದಾಟುವಾಗ ಓಮ್ಮಿ ಅತೀ ವೇಗದಲ್ಲಿ ಬಂದಿದ್ದು, ಇವರ ಬಲ ಅಂಗೈಗೆ ಓಮ್ಮಿಯ ಸೈಡ್ ಮಿರರ್ ತಾಗಿದೆ. ಈ ಬಗ್ಗೆ ಪೊಲೀಸ್ ದೂರು ನೀಡಲು ಸಿ.ಸಿ. ಕ್ಯಾಮರಾ ದೃಶ್ಯಾವಳಿಯನ್ನು ಪರೀಕ್ಷಿಸಿ ಮಾಹಿತಿ ನೀಡುವಂತೆ ಸ್ಥಳೀಯ ಟ್ರಾಫಿಕ್ ಪೊಲೀಸರಲ್ಲಿ ವಿನಂತಿಸಿದ್ದಾರೆಂದು ತಿಳಿದುಬಂದಿದೆ.

ನಿಮ್ಮದೊಂದು ಉತ್ತರ