ಕುವೆಟ್ಟು : ಕುವೆಟ್ಟು ಗ್ರಾಮದ ಪಿಲಿಚಂಡಿಕಲ್ಲು ಎಂಬಲ್ಲಿ ವ್ಯಕ್ತಿಯೊಬ್ಬರು ರಸ್ತೆ ದಾಟುತ್ತಿದ್ದ ವೇಳೆ ಕಾರೊಂದು ಡಿಕ್ಕಿಹೊಡೆದು ಗಂಭೀರ ಗಾಯವಾದ ಘಟನೆ ಜು.19 ರಂದು ನಡೆದಿದೆ.
ಬೆಳ್ತಂಗಡಿ ಸಂಜಯನಗರ ನಿವಾಸಿ, ನಿವೃತ್ತ ಸರಕಾರಿ ಉದ್ಯೋಗಿ ಪಿ.ಕೆ ಅಬ್ದುಲ್ ರಹಿಮಾನ್ (70ವ) ಅವರೇ ಅಪಘಾತಕ್ಕೊಳಗಾದವರು.ಚಿಕ್ಕಮಗಳೂರು ವಿಜಯಪುರ ನಿವಾಸಿ ಸುಲ್ತಾನ್ ಮೊಹ್ಯುದ್ದೀನ್ ಜೀಲಾನಿ ಎಂಬವರು ದುಡಿಕುತನದಿಂದ ಕಾರನ್ನು ಚಲಾಯಿಸಿಕೊಂಡು ಬಂದಿರುವುದು ಈ ಅಪಘಾತಕ್ಕೆ ಕಾರಣವಾಗಿದೆ.
ಅಬ್ದುಲ್ ರಹಿಮಾನ್ ಅವರ ಬುಜ ಮತ್ತು ಎಡ ಕಾಲಿನ ಮೂಳೆ ಮುರಿತಗೊಂಡಿದ್ದು, ತಲೆ ಮತ್ತು ದೇಹದ ಇತರ ಭಾಗಗಳಿಗೂ ಗಾಯವಾಗಿದೆ.ತಕ್ಷಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳ್ತಂಗಡಿ ಸಂಚಾರಿ ಠಾಣೆಯಲ್ಲಿ ಜು.20 ರಂದು ಪ್ರಕರಣ ದಾಖಲಾಗಿದೆ.