ಬೆಳ್ತಂಗಡಿ : ಇಲ್ಲಿಯ ಬದ್ಯಾರು ನಿವಾಸಿ, ಕೃಷಿ,ಕೂಲಿ ಕಾರ್ಮಿಕ ಕುಶಾಲಪ್ಪ ಗೌಡ (46) ರವರ ಶವ ಜು.3 ರಂದು ಮನೆಯ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ಕೃಷಿ, ಕೂಲಿ ಕಾರ್ಮಿಕ ಮೃತ ಕುಶಾಲಪ್ಪ ಗೌಡ ಮನೆಯ ಸಮೀಪದ ಕೆರೆಯ ಪಕ್ಕದಲ್ಲಿ ಕಣಿ
ಯಲ್ಲಿ ಬೆಳೆದಿರುವ ಹುಲ್ಲು ತೆಗೆಯುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ
ಬಿದ್ದು ಮೃತಪಟ್ಟರು.ಪಕ್ಕದ ಮನೆಯವರ ತೋಟದ ಕೆಲಸಕ್ಕೆ ತೆರಲುವ ಸಮಯದಲ್ಲಿ ನೋಡಿ ಮನೆಯವರಿಗೆ ತಿಳಿಸಿದರು.ಮೃತ ಶವವನ್ನು ಕೆರೆಯಿಂದ ಮೇಲೆತ್ತಲು ಸ್ಥಳೀಯ ಯುವಕರ ಸಹಕರಿಸಿದರು.
ಈ ಬಗ್ಗೆ ಬೆಳ್ತಂಗಡಿ ಪೋಲಿಸ್ ಠಾಣೆಗೆ ಮನೆಯವರು ದೂರು ನೀಡಿದ್ದಾರೆ.