ನಿಡ್ಲೆ: ಸುಬ್ರಮಣ್ಯದಿಂದ ಧರ್ಮಸ್ಥಳಗಾಗಿ ಗೋಕರ್ಣಕ್ಕೆ ತೆರಳುವ ಕೆಎಸ್ ಆರ್ ಟಿ ಸಿ ಬಸ್ ಒಂದು ಕಾರಿಗೆ ಸೈಡ್ ಕೊಡುವ ವೇಳೆ ಚರಂಡಿಗೆ ಉರುಳಿದ ಘಟನೆ ನಿಡ್ಲೆ ಕೆರೆಕಂಡ ಎಂಬಲ್ಲಿ ಜೂ.19 ಮದ್ಯಾಹ್ನ ನಡೆದಿದೆ.
ಅದೃಷ್ಟವಶಾತ್ ಪ್ರಯಾಣಿಕರು ಯಾರಿಗೂ ಗಾಯವಾಗಿಲ್ಲ ಎಂದು ತಿಳಿದುಬಂದಿದೆ. ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಕಾರು ರಾಂಗ್ ಸೈಡಿನಿಂದ ಬಂದಿರುವುದೇ ಅಪಘಾತಕ್ಕೆ ಕಾರಣವೆನ್ನಲಾಗಿದೆ.