ಕ್ರೈಂ ವಾರ್ತೆ

ಉಜಿರೆ ಎಸ್.ಡಿ.ಎಂ ಕಾಲೇಜು ಹಿಂಭಾಗ ನಾಗರಾಜ ಕಾಂಪೌಂಡಿನ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಉಜಿರೆ : ಉಜಿರೆ ಎಸ್.ಡಿ.ಎಂ ಕಾಲೇಜು ಹಿಂಭಾಗ ನಾಗರಾಜ ಕಾಂಪೌಂಡ್ ನ ಬಾವಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ಜೂ.19ರಂದು ನಡೆದಿದೆ.

ಶ್ರೀ ದುರ್ಗಾ ನಿಲಯ ಎಂಬ ಮನೆಯ ಬಾವಿಯಲ್ಲಿ ಶವ ಪತ್ತೆಯಾಗಿದೆ. ಆದರೆ ಈ ಮನೆಯವರು ಮೈಸೂರಿನಲ್ಲಿ ನೆಲೆಸಿದ್ದು, ಮನೆಗೆ ಬೀಗ ಹಾಕಿತ್ತು. ಒಂದು ವಾರದ ಹಿಂದೆ ಮನೆಯವರು ಬಂದಾಗ ಬಾವಿಯನ್ನು ಗಮನಿಸಿದ್ದರು. ಆದರೆ, ಇವರು ಮೃತ ದೇಹದ ತಲೆಯನ್ನು ತೆಂಗಿನಕಾಯಿ ಎಂದುಕೊಂಡು ವಾಪಾಸ್ ಆಗಿದ್ದರು.

ಆದರೆ ನಿನ್ನೆಯಿಂದ ಯಾವುದೋ ಮೃತದೇಹದ ವಾಸನೆ ಬರುತ್ತಿದ್ದುದನ್ನು ಗಮನಿಸಿದ ಊರಿನವರು, ಇಂದು ಬಂದು ನೋಡಿದಾಗ ಬಾವಿಯಲ್ಲಿ ಮೃತ ದೇಹವಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಎಸ್ ಐ ನಂದಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಿಮ್ಮದೊಂದು ಉತ್ತರ