ನಾವರ: ನಾವರ ಗ್ರಾಮದ ಜಾಲಗುತ್ತು ಮನೆಯ ವಸಂತ ಪೂಜಾರಿಯವರ ಮನೆಯ ಬಾವಿಯಲ್ಲಿ ಚಿರತೆ ಪತ್ತೆಯಾಗಿದೆ.ಕಾಡಿನಿಂದ ನಾಡಿಗೆ ಬಂದ ಚಿರತೆ ಕಳೆದ ರಾತ್ರಿ ಅಂದಾಜು 12 ಗಂಟೆಯ ರಾತ್ರಿ ಬಾವಿಗೆ ಬಿದ್ದಿದೆ ಎಂದು ಮನೆಯವರು ಮಾಹಿತಿ ನೀಡಿದ್ದಾರೆ.
ಚಿರತೆ ಬಿದ್ದ ಬಾವಿ ದೊಡ್ಡದಾಗಿದ್ದು ಬಾವಿಯೊಳಗಿರುವ ಗುಹೆಯೊಳಗೆ ಅವಿತು ಕೂತಿದೆ. ಈಗಾಗಲೇ ವನ್ಯಜೀವಿ ಸಂರಕ್ಷಣಾ ವಿಭಾಗ, ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ವೇಣೂರು ವಲಯ ಅರಣ್ಯ ಅಧಿಕಾರಿ ಮಹಿಮ್ ಜನ್ನು, ಉಪ ಅರಣ್ಯಾಧಿಕಾರಿ ಸುರೇಶ್ ಗೌಡ, ಕಾರ್ಕಳ ವಲಯ ಅರಣ್ಯ ಅಧಿಕಾರಿ ಜಿ.ಡಿ ದಿನೇಶ್, ಅರಣ್ಯಾಧಿಕಾರಿ ರಾಘವೇಂದ್ರ ಶೆಟ್ಟಿ, ಆರಕ್ಷಕ
ಮಾಂತೇಶ್ ಗೋಡಿ, ಅರಣ್ಯ ಇಲಾಖೆಯ ಬಾಬು, ಪ್ರಕಾಶ್ ಪೂಜಾರಿ, ಶಮೀಮ್, ವಿತೇಶ್,ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ, ಸುಕ್ಕೇರಿ ಪಂಚಾಯತ್ ಸದಸ್ಯರಾದ ರವಿ ಪೂಜಾರಿ ಹಾರಡ್ಡೆ, ಶುಭಕರ ಪೂಜಾರಿ, ಊರವರಾದ ಯೋಗೀಶ್ ಅಲೆಕ್ಕಿ,ರಾಜು ಪೂಜಾರಿ ಪೆರಡಾಲು,ರವಿ ಕೋಟ್ಯಾನ್ ಜಾಲ ಹಾಗೂ ಊರವರು ಸ್ಥಳದಲ್ಲಿದ್ದಾರೆ.