ಕ್ರೈಂ ವಾರ್ತೆ

ಗೇರುಕಟ್ಟೆಯಲ್ಲಿ ತಹಶೀಲ್ದಾರ್ ನೇತೃತ್ವದ ಅಧಿಕಾರಿಗಳ ದಾಳಿ: 14 ಕ್ವಿಂ ಅನ್ನಭಾಗ್ಯದ ಅಕ್ಕಿ ಪತ್ತೆ

ಗೇರುಕಟ್ಟೆ: ಇಲ್ಲಿನ ದಿನಸಿ ಅಂಗಡಿಯೊಂದರ ಬಳಿ ಲಾರಿಯಲ್ಲಿ ಲೋಡು ಆಗುತ್ತಿದ್ದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರದಾರರಿಗೆ ಅನ್ನಭಾಗ್ಯದ ಅಕ್ಕಿಯನ್ನು ತಹಶೀಲ್ದಾರ ನೇತೃತ್ವದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡ ಘಟನೆ ಜೂ.1ರಂದು ಸಂಜೆ ನಡೆದಿದೆ.

ಗೇರುಕಟ್ಟೆಯ ಅಂಗಡಿಯ ಬಳಿಯಲ್ಲಿ ಲಾರಿಯಲ್ಲಿದ್ದ 14 ಕೆಜಿ ಅನ್ನಭಾಗ್ಯದ ಅಕ್ಕಿ ಹಾಗೂ ಲಾರಿಯನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕಳೆದ ಎರಡು ವಾರಗಳ ಹಿಂದೆ ಚಾರ್ಮಾಡಿಯಲ್ಲಿ ಅನ್ನಭಾಗ್ಯದ ಅಕ್ಕಿ ಪತ್ತೆಯಾದ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಆಹಾರ ಇಲಾಖೆ ನಿಗಾ ಇಟ್ಟಿದ್ದು, ಖಚಿತ ಮಾಹಿತಿಯ ಅಧಿಕಾರಿ ಗೇರುಕಟ್ಟೆಯಲ್ಲಿ ಅನ್ನಭಾಗ್ಯದ ಅಕ್ಕಿ ಲೋಡು ಆಗುತ್ತಿರುವ ಬಗ್ಗೆ ತಿಳಿದು ಬಂದಿದೆ.

ತಹಶೀಲ್ದಾರ್ ಮಹೇಶ್ ಜೆ, ಆಹಾರ ನಿರೀಕ್ಷಕ ವಿಶ್ವ ಕೆ, ಪರ್ಯಾಯ ನಿರೀಕ್ಷಕ ಪವಾಡಪ್ಪ ದೊಡ್ಡಮಣಿ, ಗ್ರಾಮ ಕರಣಿಕ ಪೃಥ್ವಿರಾಜ್ ಮತ್ತು ಲಿಂಗರಾಜ್ ಹಾಗೂ ವಾಹನ ಚಾಲಕ ನಂದೇಶ್ ಅವರು ಲಾರಿಗೆ ಅಕ್ಕಿ ಆಗುತ್ತಿರುವ ಸಂದರ್ಭ ದಾಳಿ ನಡೆಸಿ ಈ ಪ್ರಕರಣದ ಪತ್ತೆ ಹಚ್ಚಿದ್ದಾರೆ. ಲಾರಿ ಸಹ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಗೇರುಕಟ್ಟೆಯಲ್ಲಿ ಅನ್ನಭಾಗ್ಯದ ಅಕ್ಕಿ ಪತ್ತೆ ಪ್ರಕರಣ
ಲಾರಿ ಚಾಲಕ ಹಾಗೂ ಇತರರ ಮೇಲೆ ಕೇಸು ದಾಖಲು

ಗೇರುಕಟ್ಟೆ ಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಲಾಗುವ ಅನ್ನಭಾಗ್ಯದ ಅಕ್ಕಿ ಪತ್ತೆ ಪ್ರಕರಣದಲ್ಲಿ ಬೆಳ್ತಂಗಡಿ ಆಹಾರ ನಿರೀಕ್ಷಕ ವಿಶ್ವ ಕೆ. ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸರು ಲಾರಿ ಚಾಲಕ ಉಡುಪಿ ತಾಲೂಕಿನ ಬೊಮ್ಮರಬೆಟ್ಟು ಕೋಟ್ನಕಟ್ಟೆ ನಿವಾಸಿ ರಮೇಶ್ ಮತ್ತು ಇತರರ ಮೇಲೆ ಠಾಣಾ ಅ ಕ್ರ.ನಂ: 35/2022 ಕಲಂ: 37 ಅವಶ್ಯಕ ವಸ್ತಗಳ ಕಾಯ್ದೆ 1955 ಜೊತೆಗೆ ಕಲಂ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಹಿನ್ನಲೆ:
ಜೂ. 1ರಂದು ಸಂಜೆ ಗೇರುಕಟ್ಟೆಯಿಂದ ಲಾರಿಯಲ್ಲಿ ಅನ್ನಭಾಗ್ಯದ ಅಕ್ಕಿ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂದು ಬಂದ ಖಚಿತ ಮಾಹಿತಿಯಂತೆ ಬೆಳ್ತಂಗಡಿ ತಹಶೀಲ್ದಾರ್ ಮಹೇಶ್, ಆಹಾರ ನಿರೀಕ್ಷ ವಿಶ್ವ ಹಾಗೂ ಅಧಿಕಾರಿಗಳ ತಂಡ ಕಳಿಯ ಗ್ರಾಮದ ಗೇರುಕಟ್ಟೆಗೆ ತೆರಳಿದ್ದರು.
ಅಲ್ಲಿ ಎಸ್.ವಿ ಟ್ರೇಡರ್ಸ್‌ನ ಎದುರು ನಿಲ್ಲಿಸಿದ್ದ ಟಾಟಾ ಕಂಪನಿಯ ಈಚರ್ ವಾಹನವನ್ನು ತಪಾಸಣೆ ನಡೆಸಿದಾಗ ವಾಹನದ ಒಳಗಡೆ ಪ್ಲಾಸ್ಟಿಕ್ ಗೊಣಿ ಚೀಲದಲ್ಲಿ ಅಕ್ಕಿ ತುಂಬಿಸಿರುವುದು ಪತ್ತೆಯಾಗಿತ್ತು. ಅಕ್ಕಿಯನ್ನು ಪರಿಶೀಲಿಸಿದಾಗ ಇದು 2022ನೇ  ಮೇ ತಿಂಗಳ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ಪಡಿತರ ಚೀಟಿದಾರರ ವಿತರಣೆಗಾಗಿ ನ್ಯಾಯ ಬೆಲೆಯ ಅಂಗಡಿಗಳಿಗೆ ಸರಬರಾಜು ನೀಡಿರುವ ಅಕ್ಕಿಗೆ ಹೋಲಿಕೆ ಇರುವುದು ದೃಢಪಟ್ಟಿತ್ತು.
ಈ ಸಂದರ್ಭದಲ್ಲಿ ಲಾರಿಯ ಚಾಲಕ ರಮೇಶ್ ಎಂಬವರನ್ನು ಅಧಿಕಾರಿಗಳು ವಿಚಾರಿಸಿದಾಗ ಈ ಅಕ್ಕಿ ಕಳಿಯ ಗ್ರಾಮದಲ್ಲಿನ ಅಂಗಡಿಗಳಿಂದ ತಂದಿರುವುದಾಗಿ ತಿಳಿಸಿದ್ದರು. ಲಾರಿಯಲ್ಲಿ 24 ಪ್ಲಾಸ್ಟಿಕ್ ಗೊಣಿ ಚೀಲಗಳಲ್ಲಿ ತಲಾ 50 ಕೆ.ಜಿ ಯಂತೆ ಒಟ್ಟು 12 ಕ್ವಿಂಟಾಲ್ ಅಕ್ಕಿ ಪತ್ತೆಯಾಗಿತ್ತು. ವಶಪಡಿಸಿಕೊಂಡ ಅಕ್ಕಿಯ ಮೌಲ್ಯ ರೂ. 18 ಸಾವಿರ ಹಾಗೂ ವಶಪಡಿಸಿಕೊಂಡ ವಾಹನದ ಮೌಲ್ಯ ರೂ.12 ಲಕ್ಷ ಎಂದು ಅಂದಾಜಿಸಲಾಗಿದೆ.
ಠಾಣೆಗೆ ದೂರು:
ಪತ್ತೆಯಾದ ಅಕ್ಕಿ ಸರಕಾರವು ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಅನ್ನ ಭಾಗ್ಯ ಯೋಜನೆಯ ಅಕ್ಕಿಯಾಗಿದ್ದು, ಇದನ್ನು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಉದ್ದೇಶ ಕೊಂಡೋಗಲಾಗುತ್ತಿತ್ತು, ಇದಕ್ಕೆ ಯಾವುದೇ ಅಧಿಕೃತ ದಾಖಲಾತಿಗಳು ಇಲ್ಲ ಎಂದು ಆಹಾರ ನಿರೀಕ್ಷಕ ವಿಶ್ವ ಅವರು ಸೂಕ್ತ ಕಾನೂನು ಕ್ರಮಕ್ಕಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿದ ದೂರುನಂತೆ ಪೊಲೀಸರು ಲಾರಿ ಚಾಲಕ ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಿಮ್ಮದೊಂದು ಉತ್ತರ