ಬೆಳ್ತಂಗಡಿ :ಧರ್ಮಸ್ಥಳ ಗ್ರಾಮದ ನೇತ್ರಾವತಿ ಹಳೆ ಸೇತುವೆಯ ಬಳಿ ಮೇ 22ರ ಬೆಳಗ್ಗೆ ರಸ್ತೆ ಬದಿ ಸುಮಾರು 50 ರಿಂದ 60 ವರ್ಷ ಪ್ರಾಯದ ಅಪರಿಚಿತ ಗಂಡಸು ನರಳಾಡುತ್ತಿದ್ದು ಅವರ ಬಾಯಿಯಿಂದ ಘಾಟು ವಾಸನೆ ಹಾಗೂ ನೊರೆ ಬರುತ್ತಿದ್ದುದ್ದನ್ನು ನೋಡಿದ ರಾಘವ ಎಂಬವರು ಆ ವ್ಯಕ್ತಿಯನ್ನು 108 ಅಂಬುಲೆನ್ಸ್ ಕರೆ ಮಾಡಿ ಬರಮಾಡಿ ಅವರನ್ನು ಆಂಬುಲೆನ್ಸ್ ನಲ್ಲಿ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು , ಸದ್ರಿ ವ್ಯಕ್ತಿಯು ದಾರಿ ಮದ್ಯೆ ಮೃತಪಟ್ಟಿರುತ್ತಾರೆ.
ಸದ್ರಿ ವ್ಯಕ್ತಿಯು ಯಾವುದೋ ಕಾರಣಕ್ಕೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಧಮ೯ಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.