ಕ್ರೈಂ ವಾರ್ತೆ

ಕೋಕಂ ಜ್ಯೂಸ್ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಪೊಲೀಸ್ ವಶ

ಬೆಳ್ತಂಗಡಿ : ಕೋಕಂ ಜ್ಯೂಸ್ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಗ್ಯಾಂಗೊಂದನ್ನು ಪೊಲೀಸರು ಹಿಡಿದಿರುವ ಘಟನೆಯೊಂದು ಮೂಡಿಗೆರೆಯಲ್ಲಿ ನಡೆದಿದೆ.


ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ  ಮನೆಯೊಂದರಲ್ಲಿ ಕೋಕಂ ಜ್ಯೂಸ್ ತಯಾರಿಸಿ ಮೂಡಿಗೆರೆ ಕಡೆ ಕ್ವಾಲಿಸ್ ಕಾರಿನಲ್ಲಿ ಕೋಕಂ ಜ್ಯೂಸ್ ಮಾರಾಟ ಮಾಡುವ ನೆಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಗ್ಯಾಂಗ್ ನ್ನು ಬಂಧಿಸುವಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕಡುರುದ್ಯಾವರ ಗ್ರಾಮದ ಅಬೂಬಕ್ಕರ್ ಸಿದ್ದಿಕ್,ಅಮೃತ್ ಬಿಜುವಳ್ಳಿ, ಮೂಡಿಗೆರೆ ಟೌನ್ ನಿವಾಸಿ ರಿಷಬ್  ರಾಜ್ ಎಂಬವರನ್ನು ಬಂಧಿಸಲಾಗಿದೆ.ಬೆಳ್ತಂಗಡಿಯ ಅಬೂಬಕ್ಕರ್ ಸಿದ್ದಿಕ್ ಗೆ ಸೇರಿದ ಕ್ವಾಲಿಸ್ ಕಾರಿನಲ್ಲಿ 250 ಗ್ರಾಂ ಗಾಂಜಾ ಪತ್ತೆಯಾಗಿದೆ ಮತ್ತು ಒಂದು ಬೈಕ್ ಕೂಡ ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನಿಮ್ಮದೊಂದು ಉತ್ತರ