ಕ್ರೈಂ ವಾರ್ತೆ

ಉಜಿರೆಯಲ್ಲಿ ಸುಮಾರು 55 ವರ್ಷದ ಅಪರಿಚಿತ ವ್ಯಕ್ತಿ ಕುಸಿದು ಬಿದ್ದು ಮಂಗಳೂರು ಆಸ್ಪತ್ರೆಯಲ್ಲಿ ಮೃತ್ಯು

ಬೆಳ್ತಂಗಡಿ: ಉಜಿರೆ ಕಾಲೇಜು ರಸ್ತೆಯಲ್ಲಿರುವ ರೋಟರಿ ಬಸ್ಸು ನಿಲ್ದಾಣದ ಬಳಿ ಸುಮಾರು 55 ವರ್ಷದ ಅಪರಿಚಿತ ವ್ಯಕ್ತಿ ಮೇ 3 ರಂದು ಬಿದ್ದಿದ್ದು ಮಂಗಳೂರು ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮೇ 12 ರಂದು ನಿಧನರಾಗಿದ್ದಾರೆ

ಉಜಿರೆ ಗ್ರಾಮ ಪಂಚಾಯತ್ ಕಛೇರಿಗೆ ಸಾರ್ವಜನಿಕರೊಬ್ಬರು ದೂರವಾಣಿ ಕರೆ ಮಾಡಿ ಉಜಿರೆ ಕಾಲೇಜು ರಸ್ತೆಯಲ್ಲಿರುವ ರೋಟರಿ ಬಸ್ಸು ನಿಲ್ದಾಣದ ಬಳಿ ಗಂಡಸು ಖಾಯಿಲೆಯಿಂದ ಅಸ್ವಸ್ಥಗೊಂಡು ಬಿದ್ದಿರುವ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ವತಿಯಿಂದ ಸಿಬ್ಬಂದಿಗಳು ಆಂಬ್ಯುಲೆನ್ ನವರಿಗೆ ತಿಳಿಸಿ, ಚಿಕಿತ್ಸೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ

ನಿಮ್ಮದೊಂದು ಉತ್ತರ