ಬೆಳ್ತಂಗಡಿ: ಸವಣಾಲು ಗ್ರಾಮದ ಯುವತಿ ಯೋವ೯ರು ನಾಪತ್ತೆ ಯಾಗಿರುವುದಾಗಿ ಅವರ ತಂದೆ ಮೇ.9 ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕುವೆಟ್ಟು ಗ್ರಾಮದ ಆಸ್ಪತ್ರೆಯಲ್ಲಿ ಒಂದು ತಿಂಗಳುಗಳಿಂದ ಕಂಪ್ಯೂಟರ್ ಆಪರೇಟರ್ ಆಗಿ ಹಗಲು ಹಾಗೂ ರಾತ್ರಿ ಪಾಳೆಯಲ್ಲಿ ಕೆಲಸ ಮಾಡಿಕೊಂಡಿದ್ದವಳು ಮೇ.8 ರಂದು ರಾತ್ರಿ ಪಾಳೆಯ ಕರ್ತವ್ಯಕ್ಕೆಂದು ಮನೆಯಿಂದ ಸಂಜೆ 5.30 ಗಂಟೆಗೆ ಆಸ್ಪತ್ರೆಗೆ ಹೋದವಳು, ಮರುದಿನ ಬೆಳಿಗ್ಗೆ 9.30 ಗಂಟೆಯಾದರು ಮನೆಗೆ ಬಾರದೆ ಇರುವುದರಿಂದ ಪೋನ್ ಮಾಡಿದಾಗ ರಿಸಿವ್ ಮಾಡಲಿಲ್ಲ, ನಂತರ ಆಸ್ಪತ್ರೆಗೆ ಪೋನ್ ಮಾಡಿ ವಿಚಾರಿಸಿದಾಗ ಆಕೆ ಎಂದಿಗಿಂತ 15 ನಿಮಿಷ ಮುಂಚಿತವಾಗಿ ಅಂದರೆ ಈ ದಿನ ಮೇ 9 ರಂದು 8.15 ಗಂಟೆಗೆ ಹೋಗಿರುವುದಾಗಿ ತಿಳಿಸಿರುತ್ತಾರೆ. ನಂತರ ಅವಳಿಗೆ ಪೋನ್ ಮಾಡಿದಾಗ ಅವಳ ಪೋನ್ ಸ್ವಿಚ್ ಆಫ್ ಆಗಿರುತ್ತದೆ.ಕೆಲಸಕ್ಕೆಂದು ಹೋದವಳು ಕೆಲಸ ಮುಗಿಸಿ ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.