ಬಂಟ್ವಾಳ: ವೈದ್ಯರೊಬ್ಬರ ಬಳಿ 10 ರೂ ರಿಚಾರ್ಜ್ ಮಾಡುತ್ತೇವೆಂದು ಹೇಳಿ 1 ಲಕ್ಷದ 65 ಸಾವಿರ ರೂಪಾಯಿಗಳನ್ನು ದೋಚಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬಿ.ಸಿ. ರೋಡಿನ ವೈದ್ಯರಾಗಿರುವ ಡಾ. ಅಶ್ವಿನ್ ಬಾಳಿಗ ಏ-29 ರಂದು ಸಂಜೆ 5-30 ರ ವೇಳೆಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಜಿಯೋ ನಂಬರ್ ನ್ನು ಅಪೇಟ್ ಮಾಡೋದಾಗಿ ಹೇಳಿ ಗೂಗಲ್ ಪ್ಲೇ ಸ್ಟೋರ್ ನಿಂದ ಕ್ವಿಕ್ ಈಸಿ ಆಪ್ ನ್ನು ಡೌನ್ ಲೋಡ್ ಮಾಡಿಸಿಕೊಂಡಿದ್ದಾನೆ. ಬಳಿಕ ಜಿಯೋ ಆಪ್ ನಲ್ಲಿ 10 ರೂ ರಿಚಾರ್ಜ್ ಮಾಡಲು ತಿಳಿಸಿದ್ದಾನೆ. ಅದರಂತೆ ವೈದ್ಯರು ತಮ್ಮ ಡೆಬಿಟ್ ಕಾರ್ಡ್ ವಿವರಗಳನ್ನು ಆಪ್ ನಲ್ಲಿ ಹಾಕಿ 10 ರೂ ರಿಚಾರ್ಜ್ ಮಾಡಿದ್ದಾರೆ.ಕೂಡಲೇ ಅವರ ಖಾತೆಯಿಂದ 10 ಸಾವಿರದಂತೆ ಮೂರು ಬಾರಿ ಹಾಗೂ 45 ಸಾವಿರದಂತೆ 3 ಬಾರಿ ಹಣ ಕಟ್ ಆಗಿದೆ. ಈಗ ತಾವು ಮೋಸ ಹೋಗಿರೋದು ವೈದ್ಯರಿಗೆ ಗೊತ್ತಾಗಿದೆ. ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ.